Friday, June 5, 2026
Homeತಾಜಾ ಸುದ್ದಿನಟ ದರ್ಶನ್ ಅವರನ್ನು ಭೇಟಿಯಾಗ್ತಾರಾ ನವ ಜೋಡಿ ಸೋನಲ್ ಹಾಗೂ ತರುಣ್ ಸುಧೀರ್

ನಟ ದರ್ಶನ್ ಅವರನ್ನು ಭೇಟಿಯಾಗ್ತಾರಾ ನವ ಜೋಡಿ ಸೋನಲ್ ಹಾಗೂ ತರುಣ್ ಸುಧೀರ್

- Advertisement -
- Advertisement -

ಬೆಂಗಳೂರು;  ಮೊನ್ನೆಯಷ್ಟೇ ಸ್ಯಾಂಡಲ್ ವುಡ್ ಜೋಡಿ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ ತಮ್ಮ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಸ್ಯಾಂಡಲ್ ವುಡ್ ತಾರೆಯರು ಮಾತ್ರವಲ್ಲದೇ ವಿವಿಧ ಕ್ಷೇತ್ರದ ಸಾಕಷ್ಟು ಗಣ್ಯರು ಇವರ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ್ರು. ಸೋನಲ್ ಹಾಗೂ ತರುಣ್ ಸುಧೀರ್ ಅವರು ವೈವಾಹಿಕ ಜೀವನಕ್ಕೆ ಕಾಲಿಡೋದಕ್ಕೆ ಪ್ರಮುಖ ಕಾರಣ ಡಿ ಬಾಸ್ ದರ್ಶನ್ . ಇವರಿಬ್ಬರನ್ನು ಒಂದು ಮಾಡಿದ್ದೇ ದರ್ಶನ್. ಈಗಾಗಲೇ ಅನೇಕ ಬಾರಿ ತರುಣ್ ಹಾಗೂ ಸೋನಲ್ ಇಬ್ಬರು ಕೂಡ ಬೇರೆ ಬೇರೆ ಕಡೆ ಈ ಬಗ್ಗೆ ಹೇಳಿದ್ದಾರೆ.

ಇನ್ನು ತರುಣ್ ಸುಧೀರ್ ಅವರ ತಾಯಿ ಮಾಲತಿ ಸುಧೀರ್ ಅವರು ಕೂಡ ದರ್ಶನ್ ಅವರಿಂದಲೇ ಈ ಮದುವೆ ನಡೆಯುತ್ತಿದೆ ಎಂಬ ವಿಚಾರವನ್ನು ಈಗಾಗಲೇ ತಿಳಿಸಿದ್ದಾರೆ,ನಿನ್ನೆ ಮದುವೆ ಬಳಿಕ ಮಾಧ್ಯಮಗಳಿಗೆ ಮಾತನಾಡುತ್ತಾ ತರುಣ್ ಸುಧೀರ್ ಅವರು ದರ್ಶನ್ ಅವರನ್ನು ನೆನಪಿಸಿಕೊಂಡು ಭಾವುಕರಾಗಿದ್ದರು. ಅಲ್ಲದೇ ಕಣ್ಣೀರು ಸುರಿಸಿದ್ರು. ಇನ್ನು ಮದುವೆಗೂ ಮುನ್ನ ತರುಣ್ ಸುಧೀರ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರಿಂದ ಆಶೀರ್ವಾದವನ್ನು ಪಡೆದಿದ್ದರು. ವಿವಾಹವಾದ ಮೇಲೆ ದರ್ಶನ್ ಅವರನ್ನು ತರುಣ್ ಸುಧೀರ್ ಹಾಗೂ ಸೋನಲ್ ಮೊಂತರೋ ದರ್ಶನ್ ಅವರನ್ನು ಭೇಟಿಯಾಗ್ತಾರ ಅಂತಾ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಅವರಿಬ್ಬರು ದರ್ಶನ್ ಅವರನ್ನು ಭೇಟಿಯಾಗಲು ಶೀಘ್ರದಲ್ಲೇ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆರಡು ದಿನದಲ್ಲಿ ಅವರಿಬ್ಬರು ದರ್ಶನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -

Latest News

error: Content is protected !!