Saturday, June 6, 2026
Homeಕರಾವಳಿಮಂಗಳೂರುಮಂಗಳೂರು; ಒರಿಯರ್ದೊರಿ ಅಸಲ್ ತುಳು ಸಿನಿಮಾ ಖ್ಯಾತಿಯ ಅಶೋಕ್ ಶೆಟ್ಟಿ ನಿಧನ

ಮಂಗಳೂರು; ಒರಿಯರ್ದೊರಿ ಅಸಲ್ ತುಳು ಸಿನಿಮಾ ಖ್ಯಾತಿಯ ಅಶೋಕ್ ಶೆಟ್ಟಿ ನಿಧನ

- Advertisement -
- Advertisement -

ಮಂಗಳೂರು;: ಖ್ಯಾತ ತುಳು ರಂಗಭೂಮಿ ಕಲಾವಿದ, ಒರಿಯರ್ದೊರಿ ಅಸಲ್ ತುಳು ಸಿನಿಮಾ  ಖ್ಯಾತಿಯ ಅಶೋಕ್ ಶೆಟ್ಟಿ ಅಂಬ್ಲಮೊಗರು(53) ಅವರು ನಿಧನರಾಗಿದ್ದಾರೆ.

ಸೋಮವಾರ ಬೆಳಿಗ್ಗೆ ಅಂಬ್ಲಮೊಗರುವಿನ ಮನೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವೃತ್ತಿಪರ ಕಲಾವಿದರಾದ ಅಶೋಕ್ ಅವರು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮ ನಾಟಕ ತಂಡದಲ್ಲಿ ಸುದೀರ್ಘ ಕಾಲದ ಕಲಾ ಸೇವೆ ಸಲ್ಲಿಸಿದ್ದರು.ನಾಟಕ, ಸಿನೆಮಾ, ಧಾರವಾಹಿಗಳಲ್ಲಿ ನಟಿಸಿದ್ದ ಅವರು ಅನೇಕ ನಾಟಕಗಳನ್ನೂ ರಚಿಸಿದ್ದರು. ಅವರ ಅಗಲಿಕೆಗೆ ತುಳು ರಂಗಭೂಮಿ ಮತ್ತು ತುಳು ಸಿನೆಮಾ ರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಅಪಾರ ಬಂಧು, ಮಿತ್ರರನ್ನ ಅಗಲಿದ್ದಾರೆ.

- Advertisement -

Latest News

error: Content is protected !!