Sunday, June 7, 2026
Homeಕರಾವಳಿಕಡಬ-ಸುಬ್ರಮಣ್ಯ ಸುತ್ತಮುತ್ತ ಮುಂದುವರೆದ ಕಾಡಾನೆಗಳ ಉಪಟಳ; ಕೆಎಸ್ ಆರ್ ಟಿಸಿ ಬಸ್ ಗೆ ದಂತದಿಂದ ತಿವಿದ...

ಕಡಬ-ಸುಬ್ರಮಣ್ಯ ಸುತ್ತಮುತ್ತ ಮುಂದುವರೆದ ಕಾಡಾನೆಗಳ ಉಪಟಳ; ಕೆಎಸ್ ಆರ್ ಟಿಸಿ ಬಸ್ ಗೆ ದಂತದಿಂದ ತಿವಿದ ಸಲಗ

- Advertisement -
- Advertisement -

ಕಡಬದಲ್ಲಿ ಕಾಡಾನೆಯೊಂದು ಇಬ್ಬರನ್ನಬ ಬಲಿಪಡೆದ ಪ್ರಕರಣ ಮಾಸುವ ಮುನ್ನವೇ ಪದೇ ಪದೇ ಕಾಡಾನೆಗಳ ದಾಳಿ ನಡೆಯುತ್ತಲೆ ಇದೆ. ಮೂರ್ನಾಲ್ಕು ದಿನಗಳ ಹಿಂದೆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿತ್ತು. ಇದೀಗ ಅದರ ಬೆನ್ನಲ್ಲೇ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಸ್ಲೀಪರ್ ಬಸ್ ಗೆ ಕಾಡಾನೆಯೊಂದು ದಂತದಿಂದ ತಿವಿದು ಬಸ್ ಗೆ ಹಾನಿ ಮಾಡಿದೆ.

 ಗುರುವಾರ ತಡರಾತ್ರಿ ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದಲ್ಲಿ ಈ ಘಟನೆ ನಡೆದಿದೆ. ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಚಾಲಕ ಅನಿಲ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಕಂಡು ತಪ್ಪಿಸಲು ಯತ್ನಿಸಿದ್ದರು.ಆದರೂ ಆನೆಯು ಬಸ್ಸಿನ ಎಡಭಾಗಕ್ಕೆ ದಂತದಿಂದ ತಿವಿದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಬಸ್ಸಿಗೆ ಹಾನಿಯಾಗಿದೆ‌.

ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!