Saturday, June 6, 2026
Homeಕರಾವಳಿಪುತ್ತೂರಿನ ಪ್ರಕಾಶ್ ಫೂಟ್ ವೇರ್ ನಿಂದ 15 ಲಕ್ಷ ಕಳ್ಳತನ ಪ್ರಕರಣ; ಆರೋಪಿಗಳನ್ನು ಬಂಧಿಸಿದ ಪೊಲೀಸರು

ಪುತ್ತೂರಿನ ಪ್ರಕಾಶ್ ಫೂಟ್ ವೇರ್ ನಿಂದ 15 ಲಕ್ಷ ಕಳ್ಳತನ ಪ್ರಕರಣ; ಆರೋಪಿಗಳನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಪುತ್ತೂರಿನ ಪ್ರಸಿದ್ಧ ಚಪ್ಪಲಿ ಮಳಿಗೆ ಪ್ರಕಾಶ್‌ ಫೂಟ್ ವೇರ್‌ ನಿಂದ ಎಂಟು ತಿಂಗಳ ಹಿಂದೆ 15 ಲಕ್ಷ ರೂ. ನಗದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ದಾವಣಗೆರೆ ದೇವರಾಜ ಅರಸ್‌ ಬಡವಾಣೆಯ ಸಮೀರ್‌ (ಕಪ್ಪ), ಹಾಸನ ಶಂಕರಿಪುರಂನ ಚಂದ್ರಶೇಖರ್‌ (ಚಂದು) ಬಂಧಿತರು.

ಆರೋಪಿಗಳು ಚಪ್ಪಲಿ ಅಂಗಡಿಯಿಂದ 2022 ಸೆ. 16ರಂದು ಸುಮಾರು 15 ಲಕ್ಷ ರೂ. ಅನ್ನು ಕಳವುಗೈದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕಾಶ್‌ ಫೂಟ್ ವೇರ್‌ ಮಳಿಗೆಯ ಮಾಲೀಕ ಸಮೀರ್‌ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!