- Advertisement -
![]()
- Advertisement -
ಕುಂದಾಪುರ: ಕಾಡುಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸುತ್ತಿದ್ದವರನ್ನು ಅರೆಸ್ಟ್ ಮಾಡಿರುವ ಘಟನೆ ಕುಂದಾಪುರದ ವಂಡಾರು ಬಳಿ ನಡೆದಿದೆ.
ಭಟ್ಕಳ ಮುಂಡಳ್ಳಿಯ ಮೊಹಮ್ಮದ್ ಅಶ್ರಫ್(23), ಶಿರೂರು ಮೂಲದವರಾದ ವಾಸೀಂ ಅಕ್ರಂ (34), ಅಲಿ ಬಾಪು ಯಾಸಿನ್ (36) ಬಂಧಿತ ಆರೋಪಿಗಳು.
ಆರೋಪಿಗಳು ರಾತ್ರಿ ವೇಳೆ ಕಾಡುಪ್ರಾಣಿಗಳ ಬೇಟೆಗೆ ಅರಣ್ಯ ಪ್ರವೇಶಿಸಿದ್ದರು. ಬಂಧಿತರಿಂದ ಒಂದು ಬಂದೂಕು, 11ಕಾಡತೂಸು 4 ಹರಿತವಾದ ಚಾಕುಗಳು, ಒಂದು ಮಾಂಸ ಮಾಡಲು ಉಪಯೋಗಿಸುವ ಮಚ್ಚು, ಟಾರ್ಚ್ ಹಾಗೂ ಮೂರು ಮೊಬೈಲ್ ಫೋನ್ ಸಹಿತ ಆರೋಪಿಗಳು ಬಳಸಿದ್ದ ಆಟೋರಿಕ್ಷಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
- Advertisement -


