Saturday, June 6, 2026
Homeಕರಾವಳಿಬೆಳ್ತಂಗಡಿ; ಹೆಂಡತಿಯಿಂದಲೇ ಗಂಡನ ಬರ್ಬರ ಹತ್ಯೆ

ಬೆಳ್ತಂಗಡಿ; ಹೆಂಡತಿಯಿಂದಲೇ ಗಂಡನ ಬರ್ಬರ ಹತ್ಯೆ

- Advertisement -
- Advertisement -

ಬೆಳ್ತಂಗಡಿ: ಮಲಗಿದ್ದ ಗಂಡನನ್ನು ಹೆಂಡತಿಯೇ ಬರ್ಬರವಾಗಿ  ಕೊಲೆ ಮಾಡಿದ ಘಟನೆ  ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಅಬಂನ್ ಕೆರೆ ಮನೆ ಎಂಬಲ್ಲಿ‌ ನಡೆದಿದೆ. ಬೇಬಿ @ ಪೊಟ್ಟಸ್ ಬೇಬಿ @ ಯೋಹನ್ನಾನ್ (72) ಕೊಲೆಯಾದ ವ್ಯಕ್ತಿ.ನಲ್ಲಮ್ಮ @ ಎಲಿಯಮ್ಮ (56)  ಕೊಲೆಗೈದ ಮಹಿಳೆ .

ಕೊಲೆ‌ ಮಾಡಿದ ಬಳಿಕ ಕತ್ತಿ ಹಿಡಿದು ಕುಳಿತಿದ್ದರು ಹೆಂಡತಿ.ಇಂದು ಬೆಳಗ್ಗೆ ಕೊಲೆ  ಘಟನೆ ಬೆಳಕಿಗೆ ಬಂದಿದೆ. ಕ್ಷುಲಕ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿದ್ದಾರೆ.

ದಂಪತಿಗೆ ಒಬ್ಬ ಪುತ್ರಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದು ಒಬ್ಬ ಮಗ ಉಪ್ಪಿನಂಗಡಿಯಲ್ಲಿ ಸ್ವಂತ ಉದ್ಯೋಗ ಮಾಡುತ್ತಿದ್ದು, ಇನ್ನೋರ್ವ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಮಗಳನ್ನು ಮದುವೆ ಮಾಡಿಕೊಡಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್ ಶಿವಕುಮಾರ್ ,ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಮತ್ತು ಸಿಬ್ಬಂದಿ ಹಾಗೂ ಮಂಗಳೂರು ಬೆರಳಚ್ಚು ವಿಭಾಗ ಡಿವೈಎಸ್ಪಿ ಗೌರೀಶ್ ಸಿಬ್ಬಂದಿ ಸಚಿನ್, ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!