Monday, May 20, 2024
Homeತಾಜಾ ಸುದ್ದಿದೀಪ ಬೆಳಗಲು ಏಪ್ರಿಲ್ 5ನ್ನೇ ಮೋದಿ ಆಯ್ದುಕೊಂಡಿದ್ದೇಕೆ.?

ದೀಪ ಬೆಳಗಲು ಏಪ್ರಿಲ್ 5ನ್ನೇ ಮೋದಿ ಆಯ್ದುಕೊಂಡಿದ್ದೇಕೆ.?

spot_img
- Advertisement -
- Advertisement -

ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಪ್ರಿಲ್ 5ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗುವಂತೆ ಮನವಿ ಮಾಡಿದ್ದಾರೆ. ಮನೆ ದೀಪಗಳನ್ನು ಆರಿಸಿ. ಬಾಲ್ಕನಿ ಅಥವಾ ಮನೆ ಮುಂದೆ ಬಂದು ದೀಪ, ಮೇಣದಬತ್ತಿ ಅಥವಾ ಮೊಬೈಲ್ ಟಾರ್ಚ್ ಮೂಲಕ ದೀಪ ಬೆಳಗುವಂತೆ ಹೇಳಿದ್ದಾರೆ. ಏಪ್ರಿಲ್ 5ರಂದೇ ಮೋದಿ ಇದನ್ನು ಹೇಳಲು ಕೆಲ ಕಾರಣಗಳಿವೆ. ಏಪ್ರಿಲ್ 5 ಇತಿಹಾಸದಲ್ಲಿ ಒಂದು ಪ್ರಮುಖ ದಿನ. ಈ ದಿನ ಅನೇಕ ಪ್ರಮುಖ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ.

ಗಾಂಧಿಜೀಯವರ ದಂಡಿ ಸತ್ಯಾಗ್ರಹಕ್ಕೆ ಏಪ್ರಿಲ್ 5 ಸಾಕ್ಷಿಯಾಗಿದೆ. ಮಾರ್ಚ್ 12ರಂದು ಶುರುವಾದ ಈ ಸತ್ಯಾಗ್ರಹ ಏಪ್ರಿಲ್ 6ರಂದು ಮುಕ್ತಾಯಗೊಂಡಿತ್ತು. ಆದ್ರೆ ಏಪ್ರಿಲ್ 5ರಂದು ಗಾಂಧಿಜೀ ದಂಡಿ ತಲುಪಿದ್ದರು. ಈ ದಿನ ಇತಿಹಾಸದಲ್ಲಿ ಪ್ರಸಿದ್ಧಿ ಪಡೆದಿದೆ. ಈ ಸತ್ಯಾಗ್ರಹಕ್ಕೆ ಜನರಿಂದ ಸಾಕಷ್ಟು ಬೆಂಬಲ ಸಿಕ್ಕಿತ್ತು.

ಬಾಬು ಜಗಜೀವನ್ ರಾಮ್ ಜನಿಸಿದ್ದು ಇದೇ ದಿನ. ಏಪ್ರಿಲ್ 5, 1908 ರಂದು ಅವರು ಜನಿಸಿದ್ದರು. ಅವರು 50 ವರ್ಷಗಳ ಕಾಲ ಸಂಸದರಾಗಿ ವಿಶ್ವ ದಾಖಲೆ ಬರೆದಿದ್ದರು. ಅವರು 1936 ರಿಂದ 1986 ರವರೆಗೆ ಸಂಸದರಾಗಿದ್ದರು. ಆ ವರ್ಷಗಳಲ್ಲಿ ಅವರು ಸಮಾನತೆ ಮತ್ತು ದೀನ ದಲಿತರಿಗಾಗಿ ಸಾಕಷ್ಟು ಹೋರಾಡಿದ್ದರು. ಅವರು ದೇಶದ ಮೊದಲ ದಲಿತ ಉಪ ಪ್ರಧಾನ ಮಂತ್ರಿಯಾಗಿದ್ದರು.

ಭಾರತೀಯ ನೌಕಾಪಡೆಯ ಇತಿಹಾಸದಲ್ಲಿ ಪ್ರಮುಖ ದಿನ. ಏಪ್ರಿಲ್ 5 ರಂದು ಭಾರತದಲ್ಲಿ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ. 1919 ರಲ್ಲಿ ಈ ದಿನದಂದು ಆಧುನಿಕ ಭಾರತೀಯ ವ್ಯಾಪಾರಿ ಸಾಗಾಟ ಪ್ರಾರಂಭವಾಯಿತು. 5,940 ಟನ್ಗಳಷ್ಟು ಲಿಬರ್ಟಿ, ಸಿಂಧಿಯಾ ಸ್ಟೀಮ್ ನ್ಯಾವಿಗೇಷನ್ ಕಂಪನಿ ತನ್ನ ಮೊದಲ ಸಮುದ್ರಯಾನವನ್ನು ಪ್ರಾರಂಭಿಸಿತ್ತು. ಹಡಗು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿತ್ತು. ಇದು ಭಾರತೀಯ ಹಡಗು ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯಾಗಿತ್ತು. ಆ ಸಮಯದಲ್ಲಿ ಸಮುದ್ರ ಮಾರ್ಗಗಳನ್ನು ಬ್ರಿಟಿಷರು ಆಕ್ರಮಿಸಿಕೊಂಡಿದ್ದರು. ಈ ದಿನಾಂಕದಂದು 1979 ರಲ್ಲಿ ದೇಶದ ಮೊದಲ ನೌಕಾ ವಸ್ತು ಸಂಗ್ರಹಾಲಯವನ್ನು ಮುಂಬೈನಲ್ಲಿ ತೆರೆಯಲಾಯಿತು. ಆ ಸಮಯದಲ್ಲಿ ಮುಂಬೈಯನ್ನು ಬಾಂಬೆ ಎಂದು ಕರೆಯಲಾಗುತ್ತಿತ್ತು.

- Advertisement -
spot_img

Latest News

error: Content is protected !!