ದಕ್ಷಿಣ ಕನ್ನಡ: ಸುಳ್ಯ ಸಮೀಪದ ಮುರೂರಿನಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸರ ಮೇಲೆ ಕೇರಳ ಕಡೆಯಿಂದ ಬಂದಿರುವ ವ್ಯಕ್ತಿಯೊಬ್ಬ ಕಲ್ಲು ತೂರಾಟ ನಡೆಸಿದ್ದಾನೆ. ಕೊರೊನಾ ಹರಡಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಸುಳ್ಯದ ಮುರೂರು ಗಡಿಯಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಬುಧವಾರ ಸಂಜೆ 6 ಗಂಟೆಗಳ ಸುಮಾರಿಗೆ ಎಎಸ್ಐ ಭಾಸ್ಕರ್ ಪ್ರಸಾದ್ ಹಾಗೂ ಮುಖ್ಯ ಪೇದೆ ರಾಮನಾಯ್ಕರವರು ಕರ್ತವ್ಯದಲ್ಲಿದ್ದು, ಜನರ ಹಾಗೂ ವಾಹನಗಳ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೇರಳ ಕಡೆಯಿಂದ ಬಂದಿರುವ ಪರಪ್ಪೆಯ ಸಿನಾನ್ ಎಂಬ ಯುವಕ ಮುರೂರು ಗಡಿಭಾಗಕ್ಕೆ ಬಂದು ಪೊಲೀಸರ ಮಾತನ್ನು ಕೇಳದೆ ಗಡಿ ದಾಟಲು ಯತ್ನಿಸಿದ್ದಾನೆ. ಗಡಿಯನ್ನು ದಾಟದಂತೆ ಪೊಲೀಸರು ಮನವಿ ಮಾಡುತ್ತಿದ್ದಂತೆ ಆತ ನೆಲದಿಂದ ಕಲ್ಲು ತೆಗೆದು ಏಕಾಏಕಿ ಪೊಲೀಸರ ಮೇಲೆ ಬಿಸಾಡಲು ಆರಂಭಿಸಿದ್ದಾನೆ.
ಪೊಲೀಸರ ಮೇಲೆ ಕಲ್ಲು ಎಸೆದ ಪರಿಣಾಮ ಕರ್ತವ್ಯದಲ್ಲಿದ್ದ ಎಎಸ್ಐ ಭಾಸ್ಕರ ಪ್ರಸಾದ್ ಹಾಗೂ ಪೋಲಿಸ್ ಸಿಬ್ಬಂದಿ ರಾಮ ನಾಯ್ಕರಿಗೆ ಗಾಯಗಳಾಗಿದೆ. ಮಾತ್ರವಲ್ಲದೆ ಈತ ಸ್ಧಳದಲ್ಲಿದ್ದ ಹೈವೇ ಪಟ್ರೋಲ್ ವಾಹನಕ್ಕೂ ಕಲ್ಲು ಬಿಸಾಡಲು ಆರಂಭಿಸಿದ್ದಾನೆ. ಕೂಡಲೇ ವಿಷಯ ತಿಳಿದು ಸುಳ್ಯ ಎಸ್ಐ ಹರೀಶ್ ಕೂಡಾ ಮುರೂರಿಗೆ ಆಗಮಿಸಿದ್ದಾರೆ.ಗಾಯಾಳು ಪೋಲೀಸರಿಗೆ ಚಿಕಿತ್ಸೆ ನೀಡಲಾಗಿದೆ. ಆರೋಪಿಯು ಕಲ್ಲು ಹೊಡೆದು ಓಡಿ ಹೋಗಿದ್ದು, ಆತನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504,323,332,353, ಹಾಗೂ ಸರಕಾರಿ ಸ್ವತ್ತುಗಳ ಹಾನಿ ಮಾಡಿದ ಪ್ರಕರಣ ಸೇರಿದಂತೆ ಪ್ರಕರಣ ದಾಖಲಾಗಿದೆ.
ಗಡಿ ದಾಟಲು ಬಿಡದ ರಾಜ್ಯ ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾದ ಕೇರಳ ಯುವಕ
- Advertisement -
- Advertisement -
- Advertisement -