ಬೆಳಗಾವಿ : ರಾಯಬಾಗ್ ತಾಲೂಕಿನ ಭಿರಡಿ ಗ್ರಾಮದ ಒಂದೇ ಕುಟುಂಬದ 4 ಜನರು ಬುಧವಾರ ತಡರಾತ್ರಿ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ರಾಯಬಾಗ ತಾಲೂಕಿನ ರೈಲುನಿಲ್ದಾಣ ಬಳಿ ನಡೆದಿದೆ.
ಸಾತಪ್ಪ ಅಣ್ಣಪ್ಪ ಸುತಾರ (60),ಮಹಾದೇವಿ ಸಾತಪ್ಪ ಸುತಾರ (50), ಸಂತೋಷ ಸಾತಪ್ಪ ಸುತಾರ (26), ದತ್ತಾತ್ರಯ ಸಾತಪ್ಪ ಸುತಾರ (28) ಮೃತ ದುರ್ದೈವಿಗಳು. ಆತ್ಯಹತ್ಯೆ ಮಾಡಿಕೊಂಡವರು
ರಾಯಬಾಗ್ ತಾಲೂಕಿನ ಭಿರಡಿ ಗ್ರಾಮದ ಕಲ್ಲಪ್ಪ ಬಡಿಗೇರ ಮತ್ತು ಆತನ ಪತ್ನಿ ಇಬ್ಬರು ಗಂಡು ಮಕ್ಕಳು ಎಂದು ಗುರುತಿಸಲಾಗಿದೆ.
ಮೃತರು ತಂದೆ ಮಾಡಿದ ಸಾಲ ಹಾಗೂ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಕುಟುಂಬ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸ್ಥಳಕ್ಕೆ ಬೆಳಗಾವಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶವ ಪರೀಕ್ಷೆಗಾಗಿ ಮೃತದೇಹಗಳನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.