Tuesday, May 21, 2024
Homeತಾಜಾ ಸುದ್ದಿಅಗ್ನಿಪಥ ಯೋಜನೆ ತರಲು ಹೇಳಿದವರು ಯಾರು? ಸೇನೆ ಶಿಫಾರಸು ಮಾಡಿತಾ? ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಅಗ್ನಿಪಥ ಯೋಜನೆ ತರಲು ಹೇಳಿದವರು ಯಾರು? ಸೇನೆ ಶಿಫಾರಸು ಮಾಡಿತಾ? ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ

spot_img
- Advertisement -
- Advertisement -

ಹಾಸನ: ದೇಶದ ಯುವಜನರ ವಿರೋಧದ ನಡುವೆಯೂ ಹಠಕ್ಕೆ ಬಿದ್ದು ಅಗ್ನಿಪಥ್ ಯೋಜನೆ ಜಾರಿಗೆ ತರಲು ಹೊರಟಿರುವ ಕೇಂದ್ರ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅತೃಪ್ತಿ ವ್ಯಕ್ತಪಡಿಸಿದರು.

ಹಾಸನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಈಗಿರುವ ಹಳೆಯ ವ್ಯವಸ್ಥೆಯಲ್ಲಿ ಇಲ್ಲಿಯವರೆಗೂ ದೇಶದ ರಕ್ಷಣೆ ಮಾಡಲಿಲ್ಲವೆ? ಅಗ್ನಿಪಥ್ ಯೋಜನೆ ಯಾರು ತರಲು ಹೇಳಿದರು. ಇವರಿಗೆ, ಯಾವ ಉದ್ದೇಶದಿಂದ ತರುತ್ತಿದ್ದೀರಿ ಎಂದು ಅವರು ಪ್ರಶ್ನಿಸಿದರು. ಯಾರನ್ನು ಕೇಳಿ ಅಗ್ನಿಪಥವನ್ನು ಜಾರಿ ಮಾಡುತ್ತಿದ್ದೀರಿ? ರಕ್ಷಣೆಗೆ ಸಂಬಂಧಿಸಿದ ಸಂಸದೀಯ ಸಮಿತಿ ಶಿಫಾರಸು ಮಾಡಿತ್ತಾ? ಅಥವಾ ಈ ಯೋಜನೆಯನ್ನು ಜಾರಿಗೆ ತನ್ನಿ ಎಂದು ಸೇನೆ ಏನಾದರೂ ಶಿಫಾರಸು ಮಾಡಿತ್ತಾ? ಈ ಬಗ್ಗೆ ಕೇಂದ್ರ ಸರಕಾರ ದೇಶಕ್ಕೆ ಉತ್ತರ ನೀಡಬೇಕಿದೆ ಎಂದು ಅವರು ಆಗ್ರಹಪಡಿಸಿದರು.

ಯಾವ ಉದ್ದೇಶದಿಂದ ಏಕಾಏಕಿ ಹತ್ತು ಲಕ್ಷ ಜನ ಯುವಕರಿಗೆ ಕೆಲಸ ಕೊಡುತ್ತಿದ್ದೀರಿ? ಕ್ಷೌರದ ಶಾಪ್ ತೆರೆಯಲು ಮಿಲಿಟರಿಗೆ ಇವರನ್ನು ತೆಗೆದುಕೊಳ್ಳುತ್ತಾರೆ ಎಂದು ಕೆಲ ಬಿಜೆಪಿ ನಾಯಕರೇ ಹೇಳಿದ್ದಾರೆ. ಕ್ಷೌರದ ಅಂಗಡಿ ಇಟ್ಟುಕೊಳ್ಳಲು ಅಲ್ಲಿಗೆ ಕರೆದುಕೊಂಡು ಹೋಗಿ ಟ್ರೈನಿಂಗ್ ಕೊಡಬೇಕಾ? ಕ್ಷೌರದ ಅಂಗಡಿ ಇಟ್ಟುಕೊಳ್ಳಲು ಅಗ್ನಿವೀರರು ಅಂತ ಸರ್ಟಿಫಿಕೇಟ್ ಕೊಡಬೇಕಾ? ಅಗ್ನಿಪಥ ಎನ್ನುವುದು ಆರ್ಎಸ್ಎಸ್ ಐಡಿಯಾ. ಅವರ ಚಟುವಟಿಕೆಗಳನ್ನು ಸೇನೆಯೊಳಕ್ಕೆ ನುಸುಳುವಂತೆ ಮಾಡಲು ಅಗ್ನಿಪಥ್ ಜಾರಿಗೆ ತರಲಾಗುತ್ತಿದೆ. ಹಿಂದೆ ಹಿಟ್ಲರ್ ಕಾಲದಲ್ಲಿ ಇದ್ದ ನಾಜಿ ಪಡೆಯನ್ನು ಭಾರತದಲ್ಲಿ ಈಗ ತರುವಂತಹ ಒಂದು ಪ್ರಾಯೋಗಿಕವಾದ ಕಾರ್ಯಕ್ರಮ ಇದಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

- Advertisement -
spot_img

Latest News

error: Content is protected !!