Saturday, June 6, 2026
Homeಕರಾವಳಿಸುಳ್ಯ; ಪಂಜದಲ್ಲಿ ಟೆಲಿಫೋನ್ ಕೇಬಲ್ ಕದಿಯುವಾಗ ಸಿಕ್ಕಿ ಬಿದ್ದ ಯುವಕರು

ಸುಳ್ಯ; ಪಂಜದಲ್ಲಿ ಟೆಲಿಫೋನ್ ಕೇಬಲ್ ಕದಿಯುವಾಗ ಸಿಕ್ಕಿ ಬಿದ್ದ ಯುವಕರು

- Advertisement -
- Advertisement -

ಸುಳ್ಯ; ಟೆಲಿಫೋನ್ ಕೆಬಲ್ ಕದ್ದುಬೈಕ್ ನಲ್ಲಿ ಸಾಗಿಸುತ್ತಿದ್ದಾಗ ಯುವಕರು ಸಿಕ್ಕಿ ಬಿದ್ದ ಘಟನೆ ಪಂಜದಲ್ಲಿ ನಡೆದಿದೆ.

ಇಲ್ಲಿನ ಕರಿಕ್ಕಳದಲ್ಲಿ ಟೆಲಿಫೋನ್ ಕೇಬಲ್ ನ್ನು  ಸಂಗ್ರಹಿಸಿ ಮಾರಾಟ ಮಾಡಲು  ರಾತ್ರಿ ವೇಳೆ ಕೊಂಡೊಯ್ಯತ್ತಿದ್ದಾಗ ಯುವಕರಿಬ್ಬರು ಸಾರ್ವಜನಿಕರಿಗೆ ಸಿಕ್ಕಿ ಬಿದ್ದಿದ್ದಾರೆ. ಅವರನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ  ದರ್ಶನ್ ಮತ್ತು ನಾಗರಾಜ್ ಎಂಬವರನ್ನು ಸುಬ್ರಹ್ಮಣ್ಯ  ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಇವರು  ನೀರು ಸರಬರಾಜು ಯೋಜನೆಗೆ ರಸ್ತೆ ಬದಿಯಲ್ಲಿ ಹೊಂಡಗಳ ತೆಗೆಯುತ್ತಿರುವ ಜೇಸಿಬಿಯಲ್ಲಿ ಕೆಲಸ ಮಾಡುತ್ತಿದ್ದು,

 ಈ  ವೇಳೆ ಸಿಕ್ಕ ಟೆಲಿಪೋನ್ ಕೇಬಲ್ ನ್ನು ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. ಸದ್ಯ  ಸುಬ್ರಹ್ಮಣ್ಯ ಪೋಲೀಸರು ಆರೋಪಿಗಳ ಸಹಿತ ಸೊತ್ತು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!