Sunday, June 7, 2026
Homeಕರಾವಳಿಸುಳ್ಯ; ಮದ್ದಿಗೆಂದು ತೆರಳಿದ ನವವಿಹಾಹಿತೆ ನಾಪತ್ತೆ ಪ್ರಕರಣ; ಪೊಲೀಸ್ ಠಾಣೆಗೆ ಹಾಜರಾದ ಮಹಿಳೆ

ಸುಳ್ಯ; ಮದ್ದಿಗೆಂದು ತೆರಳಿದ ನವವಿಹಾಹಿತೆ ನಾಪತ್ತೆ ಪ್ರಕರಣ; ಪೊಲೀಸ್ ಠಾಣೆಗೆ ಹಾಜರಾದ ಮಹಿಳೆ

- Advertisement -
- Advertisement -

ಸುಳ್ಯ; ಮದ್ದಿಗೆಂದು ಗಂಡನ ಮನೆಯಿಂದ ತೆರಳಿದ ನವವಿವಾಹಿತೆ ನಾಪತ್ತೆಯಾದ ಪ್ರಕರಣ ಇದೀಗ ಸುಖಾಂತ್ಯವಾಗಿದೆ. ನಾಪತ್ತೆಯಾಗಿದ್ದ ನವವಿವಾಹಿತೆ ಸುಳ್ಯ ಠಾಣೆಗೆ ಹಾಜರಾಗಿರುವುದಾಗಿ ತಿಳಿದುಬಂದಿದೆ.

ಜ.22 ರಂದು ಸಂಜೆ ಮಡಿಕೇರಿಯಲ್ಲಿ ಪತ್ತೆಯಾದ ಕೀರ್ತಿಶ್ರೀ ಅವರನ್ನು ಸುಳ್ಯ ಪೊಲೀಸ್ ಠಾಣೆಗೆ ಹಾಜರು ಪಡಿಸಿ ಬಳಿಕ ತಾಯಿ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ತನ್ನ ತಾಯಿಯ ಮನೆಗೆ ಹೋಗುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಮನೆಯವರನ್ನು ಕರೆಸಿ ಅವರೊಂದಿಗೆ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ.

ಜ.21 ರಂದು ಮರ್ಕಂಜದಿಂದ ಔಷಧಿಗೆಂದು ತೆರಳಿದ ವಿವಾಹಿತ ಮಹಿಳೆ ಕೀರ್ತಿಶ್ರೀ ನಾಪತ್ತೆ ಯಾಗಿದ್ದರು. ಈ ಬಗ್ಗೆ ಪತಿ ರಾಜಶೇಖರ ಪೋಲೀಸರಿಗೆ ದೂರು ನೀಡಿದ್ದರು. ಇದೀಗ ಆಕೆ ಪತ್ತೆಯಾಗಿದ್ದಾರೆ.

- Advertisement -

Latest News

error: Content is protected !!