Monday, June 30, 2025
Homeತಾಜಾ ಸುದ್ದಿಈ ಬಾರಿ ಬಿಗ್ ಮನೆಗೆ ಪ್ರವೇಶಿಸುವ ಮಂದಿ ಯಾರು ಗೊತ್ತಾ? ಇಲ್ಲಿದೆ ಸಂಭಾವ್ಯ ಸೆಲೆಬ್ರಿಟಿ ಪಟ್ಟಿ!..

ಈ ಬಾರಿ ಬಿಗ್ ಮನೆಗೆ ಪ್ರವೇಶಿಸುವ ಮಂದಿ ಯಾರು ಗೊತ್ತಾ? ಇಲ್ಲಿದೆ ಸಂಭಾವ್ಯ ಸೆಲೆಬ್ರಿಟಿ ಪಟ್ಟಿ!..

spot_img
- Advertisement -
- Advertisement -

ಬೆಂಗಳೂರು: ಈಗಾಗಲೇ ಎಲ್ಲರಿಗೂ ತಿಳಿದಂತೆ ‘ಬಿಗ್ ಬಾಸ್’ ಸೀಸನ್ 8 ಫೆಬ್ರವರಿಯಿಂದ ಆರಂಭವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯ ರಿಯಾಲಿಟಿ ಶೋ ಬಗೆಗೆ ಬಹಳ ನಿರೀಕ್ಷೆ ಇದೆ. ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಹೋಗಲಿದ್ದಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಸಂಭಾವ್ಯ ಸೆಲೆಬ್ರಿಟಿ ಪಟ್ಟಿ!..

ಈ ಬಾರಿ ಸಿಲ್ಲಿಲಲ್ಲಿ ಖ್ಯಾತಿಯ ಡಾಕ್ಟ್ರೇ -ರವಿಶಂಕರ್ ಗೌಡಬಿಗ್ ಬಾಸ್ ಮನೆ ಕಾದ ತಟ್ಟಲಿದ್ದಾರೆ.ಸರಿಗಮಪ ಖ್ಯಾತಿಯ ಮುಗ್ಧ ಹಾಡುಗಾರ ಹನುಮಂತು ಅಲ್ಲದೆ ಕಾಮಿಡಿ ಕಿಲಾಡಿ ಖಾರ್ಡ್ ಬೆಡಗಿ ನಯನಾ ದೊಡ್ಮನೆಗೆ ಬರುವ ಸುದ್ದಿ ಇದೆ.ಅವಧೂತ ಗೌರಿಗದ್ದೆ ವಿನಯ್ ಗುರೂಜಿ ಕೂಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ. ಅಲ್ಲದೆ ನಟ ಸುನೀಲ್ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದು ಭರವಸೆಯ ನಟಿ ವಿನಯ ಪ್ರಸಾದ್ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ.

ಜನಪ್ರಿಯ ಆರ್ ಜೆ ರಾಜೇಶ್ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ. ತುಂಟಾಟ ಸಿನಿಮಾದ ನಟಿ ರೇಖಾ, ಅಗ್ನಿಸಾಕ್ಷಿ ಧಾರಾವಾಹಿ ನಟಿ ವೈಷ್ಣವಿ ಗೌಡ, ನಿರ್ದೇಶಕ ರವಿ ಶ್ರೀವತ್ಸ ಬಿಗ್ ಬಾಸ್ ಬರುವ ಸಾಧ್ಯತೆ ಬಲವಾಗಿದೆ. ವಾರ್ತಾ ವಾಚಕ ಟಿವಿ 9 ಅಮರ್ ಪ್ರಸಾದ್, ಜೊತೆ ಜೊತೆಯಲ್ಲಿ ಖ್ಯಾತಿಯ ನಟ ಅನಿರುದ್ದ್ , ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ. ಒಟ್ಟಾರೆ ಈ ವಿಷಯವಾಗಿ ಸರಿಯಾದ ಪಟ್ಟಿ ದೊರೆಯಲು ಬಿಗ್ ಬಾಸ್ ಆರಂಭದವರೆಗೆ ಕಾಯಾಲೇಬೇಕು.

- Advertisement -
spot_img

Latest News

error: Content is protected !!