Friday, June 5, 2026
Homeಕರಾವಳಿಸುಳ್ಯ: ರಬ್ಬರ್ ಟ್ಯಾಪಿಂಗ್ ಗೆಂದು ಬಂದವ ದುಡ್ಡು ಹಾಗೂ ಮೊಬೈಲ್ ಕಳ್ಳತನ ಮಾಡಿ ಪರಾರಿ

ಸುಳ್ಯ: ರಬ್ಬರ್ ಟ್ಯಾಪಿಂಗ್ ಗೆಂದು ಬಂದವ ದುಡ್ಡು ಹಾಗೂ ಮೊಬೈಲ್ ಕಳ್ಳತನ ಮಾಡಿ ಪರಾರಿ

- Advertisement -
- Advertisement -

ಸುಳ್ಯ: ರಬ್ಬರ್ ಟ್ಯಾಪಿಂಗ್ ಗೆಂದು ಬಂದವ ದುಡ್ಡು ಹಾಗೂ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ . ಫೆಬ್ರವರಿ 18 ರಂದು ಮುಂಜಾನೆ ಮಾವಿನಕಟ್ಟೆ ಸಮೀಪ ರಬ್ಬರ್ ತೋಟದಲ್ಲಿ ನಡೆದಿದೆ.

ಮಾವಿನಕಟ್ಟೆ ಬಳಿ ಕಲಂದರ್ ಎಂಬುವವರ ರಬ್ಬರ್ ತೋಟದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಜಯನಗರ ನಿವಾಸಿ ಮಹಮ್ಮದ್ ಮುಟ್ಟೆತ್ತೋಡಿ ಅವರು ಕೆಲಸ ಮಾಡುತ್ತಿದ್ದರು. ಅವರ ಜೊತೆ  ತೋಟದ ಕಳೆದ ಒಂದು ತಿಂಗಳಿನಿಂದ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ವ್ಯಕ್ತಿ ಅನಿಲ್ ಎಂಬಾತನು ಕೆಲಸ ಮಾಡುತ್ತಿದ್ದ. ಫೆಬ್ರವರಿ 18 ರಂದು ಮಹಮ್ಮದ್ ಮುಟ್ಟೆತ್ತೋಡಿ ಅವರು ರೂಮಿನಲ್ಲಿ ಚಾರ್ಜ್ ಗಾಗಿ ಮೊಬೈಲ್ ಫೋನ್ ಇಟ್ಟಿದ್ದರು.ಜೊತೆಗೆ ಕೆಲಸದವರಿಗೆ ಸಂಬಳ ನೀಡಲು 32 ಸಾವಿರಗಳನ್ನು  ಅಂಗಿಯ ಜೇಬಿನಲ್ಲಿ ಇರಿಸಿದ್ದರು. ಮೊಬೈಲ್ ಹಾಗೂ ಹಣವನ್ನು ಅನಿಲ್ ಕಳ್ಳತನ ಮಾಡಿದ್ದಲ್ಲದೇ   ಮಹಮ್ಮದ್ ಅವರ ಫೋನ್ ಪೇ ಯಲ್ಲಿ ಇದ್ದ ಸುಮಾರು 17 ಸಾವಿರ ರೂ ವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿ ಫೋನ್ ಸಿಮ್  ಕಳಚಿ ಇಟ್ಟು ಫೋನ್ ಹಾಗೂ ಹಣ ದೊಂದಿಗೆ ಪರಾರಿಯಾಗಿದ್ದಾನೆ ಎಂದು ಮಹಮ್ಮದ್ ಮುಟ್ಟೆತ್ತೋಡಿ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!