Saturday, June 6, 2026
Homeಕರಾವಳಿಮಂಗಳೂರುಸುಳ್ಯ; ಕನಕಮಜಲಿನಲ್ಲಿ ಇಬ್ಬರ ಸಾವಿಗೆ ಕಾರಣನಾದ ಆರೋಪಿಗೆ ಜಾಮೀನ ಮಂಜೂರು

ಸುಳ್ಯ; ಕನಕಮಜಲಿನಲ್ಲಿ ಇಬ್ಬರ ಸಾವಿಗೆ ಕಾರಣನಾದ ಆರೋಪಿಗೆ ಜಾಮೀನ ಮಂಜೂರು

- Advertisement -
- Advertisement -

ಸುಳ್ಯ; ಕನಕಮಜಲಿನಲ್ಲಿ ಅಪಘಾತ ನಡೆಸಿ ಇಬ್ಬರ ಸಾವಿಗೆ ಕಾರಣರಾದ  ಇಕೋ ವಾಹನ ಚಾಲಕ ಅವ್ಯಕ್ತ ರಾಮಕೃಷ್ಣ ಭಟ್ ಅವರಿಗೆ ಜಾಮೀನು ಮಂಜೂರಾಗಿದೆ.

ಆರೋಪಿ ಅವ್ಯಕ್ತ ರಾಮಕೃಷ್ಣ ಭಟ್ ನಿನ್ನೆ ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಗೆ ಹಾಜರಾಗಿದ್ದು, ಅವರನ್ನು ಪೋಲೀಸ್ ಠಾಣೆಯಲ್ಲಿ ಜಾಮೀನು ಪಡೆದು ಬಿಡುಗಡೆಗೊಳಿಸಲಾಗಿರುವುದಾಗಿ ತಿಳಿದುಬಂದಿದೆ.

ಫೆ.8 ರಂದು ರಾತ್ರಿ ಅಪಘಾತ ನಡೆದಿತ್ತು. ಗುದ್ದಿ ವಾಹನವನ್ನು ಪಾದಚಾರಿಗಳಾದ ಜನಾರ್ದನ ರೈ ಮತ್ತು ರಾಮಯ್ಯ ರೈ ಯವರಿಗೆ ಗುದ್ದಿ ನಿಲ್ಲಿಸದೆ ಪರಾರಿಯಾಗಿದ್ದ ರಾಮಕೃಷ್ಣ ಭಟ್ ಸುಳ್ಯ ಬೀರಮಂಗಲದಲ್ಲಿರುವ ತನ್ನ ಮನೆಗೆ ಬಂದು ವಾಹನ ನಿಲ್ಲಿಸಿ ಮರುದಿನ ಪೋಲೀಸರು ಸಿ.ಸಿ. ಕ್ಯಾಮರಾಗಳ ಪರಿಶೀಲನೆಯ ಬಳಿಕ ವಾಹನ ಯಾರದೆಂದು ಪತ್ತೆ ಹಚ್ಚಿ ಅವರ ಮನೆಗೆ ಬರುವ ವೇಳೆಗೆ ಊರು ಬಿಟ್ಟು ಪರಾರಿಯಾಗಿದ್ದರು. ಬಳಿಕ ಗೋವಾ, ಮುಂಬೈ ತಲೆಮರೆಸಕೊಂಡಿದ್ದರು ಎನ್ನಲಾಗಿದೆ. ಇದೀಗ ಜಾಮೀನು ಸಿಗುತ್ತಿದೆ ಎಂದು ಕನ್ಫರ್ಮ್ ಆಗುತ್ತಿದ್ದಂತೆ ಪ್ರತ್ಯಕ್ಷವಾಗಿದ್ದಾರೆ.

- Advertisement -

Latest News

error: Content is protected !!