Thursday, June 4, 2026
Homeತಾಜಾ ಸುದ್ದಿಸೆಲ್ಫಿ ತೆಗೆಯಲು ಹೋಗಿ 1000 ಅಡಿ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವಕರು

ಸೆಲ್ಫಿ ತೆಗೆಯಲು ಹೋಗಿ 1000 ಅಡಿ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವಕರು

- Advertisement -
- Advertisement -

ಮಧ್ಯಪ್ರದೇಶ : ಸೆಲ್ಫಿ ಕ್ರೇಜ್ ಗೆ ಯುವಜನತೆ ಹೆಚ್ಚು ಹೆಚ್ಚು ಬಲಿಯಾಗುತ್ತಿದ್ದಾರೆ. ಆದರೂ ಜನ ಬುದ್ಧಿ ಕಲಿಯುತ್ತಿಲ್ಲ. ಅಪಾಯಕಾರಿ ಪ್ರದೇಶಗಳಿಗೆ ಹೋಗಿ ಜನ ಸೆಲ್ಫಿ ತೆಗೆದು ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಅಂತಹುದೇ ಘಟನೆ ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯಲ್ಲಿ ನಡೆದಿದೆ. ಮೊಬೈಲ್ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾಗ ಇಬ್ಬರು ಯುವಕರು ಒಂದು ಸಾವಿರ ಅಡಿ ಕಮರಿಗೆ ಬಿದ್ದು ಮೃತಪಟ್ಟಿದ್ದಾರೆ.

ಧಾರ್ ಜಿಲ್ಲೆಯ ದಾಹಿ ನಿವಾಸಿಗಳಾದ ದಿನೇಶ್ (25) ಮತ್ತು ರುವಬಂಟಿ (22) ಯುವಕರು ಮೃತಪಟ್ಟಿದ್ದಾರೆ. ಜಿಲ್ಲಾ ಕೇಂದ್ರದಿಂದ 50 ಕಿ.ಮೀ ದೂರದಲ್ಲಿರುವ ರಾಮಗಢದ ಕೋಟೆಯ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದರು. ಆ ಸಮಯದಲ್ಲಿ ದಟ್ಟವಾದ ಮಂಜು ಇತ್ತು. ಮಂಜಿನಿಂದಾಗಿ ಸರಿಯಾಗಿ ಕಾಣಿಸದೆ 1000 ಅಡಿ ಕಂದಕಕ್ಕೆ ಬಿದ್ದಿದ್ದಾರೆ.

- Advertisement -

Latest News

error: Content is protected !!