Thursday, June 4, 2026
Homeತಾಜಾ ಸುದ್ದಿಡಾ.ಬ್ರೋ ಕಾಣ್ತಿಲ್ಲ ಅನ್ನೋರಿಗೆ ಕೊನೆಗೂ ಸಿಕ್ತು ಉತ್ತರ; ಯಾಕೆ ವೀಡಿಯೋ ಹಾಕ್ತಿಲ್ಲ ಗಗನ್ ಶ್ರೀನಿವಾಸ್

ಡಾ.ಬ್ರೋ ಕಾಣ್ತಿಲ್ಲ ಅನ್ನೋರಿಗೆ ಕೊನೆಗೂ ಸಿಕ್ತು ಉತ್ತರ; ಯಾಕೆ ವೀಡಿಯೋ ಹಾಕ್ತಿಲ್ಲ ಗಗನ್ ಶ್ರೀನಿವಾಸ್

- Advertisement -
- Advertisement -

ಬೆಂಗಳೂರು; ಕನ್ನಡದ ನಂಬರ್ ಒನ್ ಯೂಟ್ಯೂಬರ್ ಡಾ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಪ್ರತಿ ಕನ್ನಡಿಗನೂ ಚಿರಪರಿಚಿತ. ಆದರೆ ಕಳೆದ  ತಿಂಗಳಿಂದ ಗಗನ್ ತಮ್ಮ ಡಾ ಬ್ರೋ ಯೂಟ್ಯೂಬ್ ಚಾನೆಲ್ ನಲ್ಲಿ ಯಾವುದೇ ವೀಡಿಯೋ ಹಾಕಿಲ್ಲ. ಚೀನಾ ಪ್ರವಾಸದ ವೀಡಿಯೋ ಕೊನೆಯ ವೀಡಿಯೋ. ಹಾಗಾಗಿ ಚೀನಾ ದಲ್ಲಿ ಭಾರತವನ್ನು ಹೊಗಳಿದ್ದಕ್ಕೆ ಗಗನ್ ಗೆ ಸಮಸ್ಯೆಯಾಗಿದೆ. ಅವರು ಚೀನಾ ಜೈಲಿನಲ್ಲಿದ್ದಾರೆ. ಡಿಪ್ರೆಷನ್ ಗೆ ಹೋಗಿದ್ದಾರೆ. ಚಾನೆಲ್ ಬ್ಲಾಕ್ ಆಗಿದೆ ಅಂತೆಲ್ಲಾ ಸುದ್ದಿಯಾಗಿತ್ತು. ಇದೀಗ ಈ ಬಗ್ಗೆ ಅವರ ಆಪ್ತ ಸ್ನೇಹಿತ ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನೆಲ್ ನ ಮಹಾಬಲ ರಾಮ್ ಅವರು ಸ್ಪಷ್ಟನೆ ನೀಡಿದ್ದಾರೆ.

ಡಾ. ಬ್ರೋ ಗೆ ಏನು ಆಗಿಲ್ಲ ಅವರು ಖುಷಿಯಾಗಿ ಆರಾಮಾಗಿದ್ದಾರೆ. ಸುಳ್ಳುಗಳಿಗೆ ಕಿವಿಯಾಗಬೇಡಿ. ಮೊನ್ನೆಯಷ್ಟೇ ನಾನು, ಡಾ.ಬ್ರೋ, ಹಾಗೂ ಫ್ಲೈಯಿಂಗ್ ಪಾಸ್ ಪೋರ್ಟ್ ನ ಆಶಾ ಹಾಗೂ ಕಿರಣ್ ಶೃಂಗೇರಿ, ಆಗುಂಬೆ ಕಡೆ ಪ್ರವಾಸ ಹೋಗಿದ್ವಿ. ಸಖತ್ ಎಂಜಾಯ್ ಮಾಡಿದ್ವಿ ಎಂದು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಲ್ಲದೇ ಗಗನ್ ಆದಷ್ಟು ಬೇಗ ನಿಮ್ಮ ಮುಂದೆ ಬರ್ತಾರೆ ಎಂದಿದ್ದಾರೆ.

- Advertisement -

Latest News

error: Content is protected !!