Wednesday, June 24, 2026
Homeಪ್ರಮುಖ-ಸುದ್ದಿನಾಳೆ ಮುಂಜಾನೆ ಬೆಂಗಳೂರು ತಲುಪಲಿರುವ ಸ್ಪಂದನಾ  ಪಾರ್ಥೀವ ಶರೀರ;ಬುಧವಾರ ಅಂತ್ಯಸಂಸ್ಕಾರ

ನಾಳೆ ಮುಂಜಾನೆ ಬೆಂಗಳೂರು ತಲುಪಲಿರುವ ಸ್ಪಂದನಾ  ಪಾರ್ಥೀವ ಶರೀರ;ಬುಧವಾರ ಅಂತ್ಯಸಂಸ್ಕಾರ

- Advertisement -
- Advertisement -

ಬೆಂಗಳೂರು; ಇಂದು ನಿಧನರಾದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥೀವ ಶರೀರ ನಾಳೆ ಮುಂಜಾನೆ ಬೆಂಗಳೂರು ತಲುಪಲಿದೆ.

ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರೋದಕ್ಕಾಗಿ ಕುಟುಂಬಸ್ಥರು ಹಾಗೂ ವಿಜಯ್ ರಾಘವೇಂದ್ರ ಸ್ನೇಹಿತರು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಥೈಲ್ಯಾಂಡ್ ಸರ್ಕಾರದ ರಾಯಭಾರ ಕಚೇರಿಯಲ್ಲಿ ಕಾನೂನು ಪ್ರಕ್ರಿಯೆಯನ್ನು ವಿಜಯ್ ಸ್ನೇಹಿತರು ನಡೆಸುತ್ತಿದ್ದಾರೆ.

ಈಗಾಗಲೇ ವಿಷಯ ತಿಳಿದು  ಸ್ಪಂದನಾ ತಂದೆ ಬಿ ಕೆ ಶಿವರಾಂ ಹಾಗೂ ಸಹೋದರ ರಕ್ಷಿತ್ ಶಿವರಾಂ ಬ್ಯಾಂಕಾಕ್ ನತ್ತ ತೆರಳಿದ್ದಾರೆ ಎ. ನಾಳೆ ಬೆಂಗಳೂರಿಗೆ ಸ್ಪಂದನಾ ಪಾರ್ಥೀವ ಶರೀರವನ್ನು ತರಲಿದ್ದು, ಬುಧವಾರ ಅಂತ್ಯಕ್ರಿಯೆ ನಡೆಸುವ ಸಾಧ್ಯತೆಯಿದೆ.

- Advertisement -

Latest News

error: Content is protected !!