ಮುಂಬೈ : ಕೊರೋನಾ ವೈರಸ್ ಹಾಟ್‌ಸ್ಪಾಟ್ ಆಗಿ ಮುಂಬೈ ಹೊರಹೊಮ್ಮುತ್ತಿದ್ದು, ಈ ನಡುವೆ ಇಲ್ಲಿ ಜನತೆ ಮಾಸ್ಕ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಇಲ್ಲಿನ ನಗರದ ಪುರಸಭೆ ಅಧಿಕಾರಿಗಳು ಬುಧವಾರ ಪ್ರಕಟಿಸಿದ್ದಾರೆ. ಇದೇ ವೇಳೆ ಒಂದು ವೇಳೆ ಆದೇಶವನ್ನು ಉಲ್ಲಂಘನೆ ಮಾಡುವವರು ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಮತ್ತು ಅವರನ್ನು ಬಂಧಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಆದೇಶದಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳು, ಕಚೇರಿಗಳು, ಸಭೆಗಳಲ್ಲಿ, ವಾಹನಗಳ ಒಳಗೆ ಈ ಕೂಡಲೇ ಜಾರಿಗೆ ಬರುವಂತೆ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಮಾಡಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಮುಖವಾಡಗಳು ಮನೆಯಲ್ಲಿ ತಯಾರು ಮಾಡಿದ್ದೇ ಆಗಿರಬಹುದು, ಇಲ್ಲವೇ ವೈದ್ಯಕೀಯವಾಗಿ ಬಳಕೆ ಮಾಡುವ ಮಾಸ್ಕ್ ಆಗಿರಬಹುದಾಗಿದೆ. ಇನ್ನು ಬಳಕೆ ಮಾಡಿದ ಮಾಸ್ಕ್‌ಗಳನ್ನು ಧರಿಸಿದ ನಂತರ, ಅವುಗಳನ್ನು ಸರಿಯಾಗಿ ಸೋಂಕುನಿವಾರಕಗಳಿಂದ ತೊಳದೆ ಬಳಿಕ ಮರುಬಳಕೆ ಮಾಡಬಹುದು’ ಎಂದು ಗ್ರೇಟರ್ ಮುಂಬೈ ಮುನ್ಸಿಪಲ್ ಕಮಿಷನರ್ ಪ್ರವೀಣ್ ಪರದೇಶಿ ಸಹಿ ಮಾಡಿದ ಆದೇಶದಲ್ಲಿ ತಿಳಿಸಲಾಗಿದೆ.