- Advertisement -
- Advertisement -
ಬೆಳ್ತಂಗಡಿ : ತಾಲೂಕಿನ 5 ಮಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ ನ್ನು ಶಾಸಕ ಹರೀಶ್ ಪೂಂಜ ಅವರು ಮಿನಿ ವಿಧಾನ ಸೌಧದಲ್ಲಿ ವಿತರಿಸಿದರು.
ಮಚ್ಚಿನ ಗ್ರಾಮದ ರವೀಂದ್ರ ಎಂ.ಬಿ.ರೂ 1,54,720, ಮರೋಡಿ ಗ್ರಾಮದ ವಿನೋದ ರೂ 1,15,000, ಉಜಿರೆ ಗ್ರಾಮದ ವನಜಾರಿಗೆ ರೂ 20852, ಆರಂಬೋಡಿ ಗ್ರಾಮದ ಇಲಿಯಾಸ್ ರಿಗೆ 18,469, ಕಳೆಂಜ ಗ್ರಾಮದ ಎಂ.ಎಫ್.ಮಹಮ್ಮದ್ ರೂ 23,561 ಹಾಗೆ ಒಟ್ಟು ಮೊತ್ತ 3,32,602 ರೂ ಮೊತ್ತದ ಚೆಕ್ ನ್ನು ಶಾಸಕರು ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಉಪಸ್ಥಿತರಿದ್ದರು.
- Advertisement -