Friday, April 19, 2024
Homeಕರಾವಳಿಕೊರೊನಾ ನಿಯಂತ್ರಣ ನಿಧಿಗಾಗಿ ರಾಜ್ಯದ ಶಾಸಕರ ವೇತನ ಶೇ.30ರಷ್ಟು ಕಡಿತ

ಕೊರೊನಾ ನಿಯಂತ್ರಣ ನಿಧಿಗಾಗಿ ರಾಜ್ಯದ ಶಾಸಕರ ವೇತನ ಶೇ.30ರಷ್ಟು ಕಡಿತ

spot_img
- Advertisement -
- Advertisement -

ಬೆಂಗಳೂರು : ಈಗಾಗಲೇ ಕೇಂದ್ರ ಸರ್ಕಾರದಿಂದ ಸಂಸದರ ವೇತನವನ್ನು ಏಪ್ರಿಲ್ 1ರಿಂದ ಅನ್ವಯವಾಗುವಂತೆ ವೇತನವನ್ನು ಕಡಿತಗೊಳಿಸಲಾಗಿತ್ತು. ಇದೇ ಮಾದರಿಯ ಕ್ರಮವನ್ನು ರಾಜ್ಯದಲ್ಲೂ ಅನುಸರಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪಗೆ ಸೂಚಿಸಿದ್ದರು. ಈ ಸೂಚನಗೆ ಒಕೆ ಎಂದಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದಲ್ಲೂ ಶಾಸಕರ ವೇತನವನ್ನು ಶೇ.30ರಷ್ಟು ಕಡಿತಗೊಳಸುವುದಾಗಿ ತಿಳಿಸಿದ್ದಾರೆ.

ಈ ಕುರಿತಂತೆ ಇಂದು ಪ್ರತಿಪಕ್ಷ ನಾಯಕರಾದಂತ ಮಾಜಿ ಸಿಎಂ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಜೊತೆಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಈ ಬಳಿಕ ರಾಜ್ಯದಲ್ಲೂ ಶೇ.30ರಷ್ಟು ಶಾಸಕರ ಸಂಬಳವನ್ನು ಕಡಿತಗೊಳಿಸುವ ನಿರ್ಧಾರವನ್ನು ಕೈಗೊಂಡಿರುವುದಾಗಿ ಪ್ರಕಟಿಸಿದ್ದಾರೆ.
ಅಂದಹಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರ ತೆಗೆದುಕೊಂಡಿರುವಂತೆ ರಾಜ್ಯದಲ್ಲೂ ಕೊರೊನಾ ನಿಯಂತ್ರಣ ಸಂಬಂಧ ಶಾಸಕರ ವೇತನ ಕಡಿತಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದರು. ಈ ಸಲಹೆ ಜೊತೆಗೆ ಸರ್ಕಾರಿ ನೌಕರರ ವೇತನ ಕಡಿತಗೊಳಿಸದಂತೆಯೂ ತಿಳಿಸಿದ್ದರು. ಈ ಮಾತಿಗೆ ಒಪ್ಪಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯ ಸರ್ಕಾರಿ ನೌಕರರ ವೇತನ ಕಡಿತಗೊಳಿಸುವುದಿಲ್ಲ ಎಂದಿದ್ದಾರೆ. ಜೊತೆಗೆ ಶೇ.30ರಷ್ಟು ರಾಜ್ಯದ ಶಾಸಕರ ವೇತನ ಕಡಿತಗೊಳಿಸವುದಾಗಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!