Monday, June 8, 2026
Homeಕರಾವಳಿಉಡುಪಿಪ್ರಿಯಾಂಕಾ ಗಾಂಧಿ ಅಜ್ಜಿ, ಅಮ್ಮನನ್ನು ಸ್ವಾಗತಿಸಿದ್ದೇವೆ, ಇವರಿಗೂ ಸ್ವಾಗತ! : ರಾಜ್ಯದಿಂದ ಪ್ರಿಯಾಂಕಾ ಸ್ಫರ್ಧೆಗೆ ಶೋಭಾ...

ಪ್ರಿಯಾಂಕಾ ಗಾಂಧಿ ಅಜ್ಜಿ, ಅಮ್ಮನನ್ನು ಸ್ವಾಗತಿಸಿದ್ದೇವೆ, ಇವರಿಗೂ ಸ್ವಾಗತ! : ರಾಜ್ಯದಿಂದ ಪ್ರಿಯಾಂಕಾ ಸ್ಫರ್ಧೆಗೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

- Advertisement -
- Advertisement -

ಉಡುಪಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕರ್ನಾಟಕ ದಿಂದಲೇ ರಾಜ್ಯಸಭೆಗೆ ಸ್ಪರ್ಧೆ ವಿಚಾರದಲ್ಲಿ ಖಂಡಿತವಾಗಿ ಯಾರು ಬೇಕಾದರೂ ಕರ್ನಾಟಕಕ್ಕೆ ಬರಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಅವರ ಅಜ್ಜಿ, ಅಮ್ಮನನ್ನು ಸ್ವಾಗತಿಸಿದ್ದೇವೆ ಇವರಿಗೂ ಸ್ವಾಗತ ಎಂದಿದ್ದಾರೆ.

ತನ್ನ ಕೆಟ್ಟ ಸಮಯದಲ್ಲಿ ಇಂದಿರಾ ಗಾಂಧಿ ಕೂಡ ಕರ್ನಾಟಕಕ್ಕೆ ಬಂದಿದ್ದರು, ಸೋನಿಯಾ ಗಾಂಧಿ ಕೂಡಾ ಕರ್ನಾಟಕದಿಂದ ಸ್ಪರ್ಧೆ ಮಾಡಿದ್ದರು, ಕರ್ನಾಟಕ ಕಾಂಗ್ರೆಸ್ ಇವತ್ತು ನೆಲ ಕಚ್ಚುತ್ತಾ ಇದೆ, ಅದೇ ರೀತಿ‌ ಕರ್ನಾಟಕಕ್ಕೆ ಬರುತ್ತಾ ಇರಬಹುದು ಎಂದು ಶೋಭಾ ಹೇಳಿದ್ದಾರೆ.

ಆದರೆ ಹಿಂಬಾಗಿಲಿಂದ ಬರುವ ಬದಲು ಲೋಕಸಭೆ ಗೆ ಸ್ಪರ್ಧಿಸಿ ಬಂದರೆ ಉತ್ತಮ, ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ ಅಲ್ಲವೇ ಎಂದು ಶೋಭಾ ಕರಂದ್ಲಾಜೆ ವ್ಯಂಗ್ಯ ವಾಡಿದ್ದಾರೆ.

- Advertisement -

Latest News

error: Content is protected !!