Thursday, June 4, 2026
Homeಜ್ಯೋತಿಷ್ಯಸುಳ್ಯ: ದಿಟ್ಟ ಹೆಜ್ಜೆಯಿಡುವಲ್ಲಿ ವಿಫಲರಾಗಿದ್ದೇವೆ ಅಂತ ನಾವು ಒಪ್ಪಿಕೊಳ್ತೇವೆ: ಸದಾನಂದ ಗೌಡ

ಸುಳ್ಯ: ದಿಟ್ಟ ಹೆಜ್ಜೆಯಿಡುವಲ್ಲಿ ವಿಫಲರಾಗಿದ್ದೇವೆ ಅಂತ ನಾವು ಒಪ್ಪಿಕೊಳ್ತೇವೆ: ಸದಾನಂದ ಗೌಡ

- Advertisement -
- Advertisement -

ಸುಳ್ಯ: ಇತ್ತೀಚೆಗೆ ನಡೆದ ಘಟನೆಗಳನ್ನು ಗಮನಿಸಿ ನಮ್ಮದೇ ಸರಕಾರ ಸ್ವಲ್ಪ ದಿಟ್ಟ ಹೆಜ್ಜೆಯನ್ನಿಡಬೇಕಿತ್ತು. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುವಲ್ಲಿ ನಾವು ಹಿಂದೆ ಬಿದ್ದಿದನ್ನು ನಾವು ಒಪ್ಪಿಕೊಳ್ಳುತ್ತೇವೆ ಅಂತ ಕೇಂದ್ರ ಸಚಿವ, ಸಂಸದ ಡಿವಿ ಸದಾನಂದಗೌಡ ಹೇಳಿದ್ದಾರೆ.

ಇಂದು ಮೃತ ಪ್ರವೀಣ್‌ ಮನೆಗೆ ಭೇಟಿ ಕೊಟ್ಟು ಕುಟುಂಬದವರಿಗೆ ಸಾಂತ್ವನ ಹೇಳಿ, ಆರ್ಥಿಕ ನೆರವಿನ ಚೆಕ್‌ ಹಸ್ತಾಂತರಿಸಿದ್ರು. ಈ ವೇಲೆ ಮಾತನಅಡಿದ ಅವರು ಇಂತಹ ಕೃತ್ಯ ತಡೆಗೆ ವಿಶೇಷ ಕಟ್ಟೆಚ್ಚರ ವಹಿಸಬೇಕಿದೆ. ಇತ್ತೀಚಿನ ದಿನದಲ್ಲಿ ಪೊಲೀಸರೆಂದರೆ ಭಯವೇ ಇಲ್ಲದಂತಾಗಿರುವುದು ಬೇಸರ ತರಿಸಿದೆ. ಪ್ರವೀಣ್‌ಗೆ ಬೆದರಿಕೆ ಬರುತ್ತಿತ್ತು. ಪೊಲೀಸರಿಗೆ ಹೇಳಿದ್ದರು. ಆದರೂ ಪೊಲೀಸರು ಕಾರ್ಯಚರಣೆ ನಡೆಸಿಲ್ಲ ಎಂಬ ವಿಚಾರ ತಿಳಿದುಬಂದಿದೆ. ಇದು ಗಂಭೀರ ಪ್ರಶ್ನೆಯಾಗಿದೆ ಎಂದರು.

- Advertisement -

Latest News

error: Content is protected !!