Thursday, June 4, 2026
Homeಕರಾವಳಿಸುಳ್ಯ: ಇನ್ನೊಬ್ಬ ಕೋಳಿ ವ್ಯಾಪಾರಿಯ ಕೊಲೆಗೆ ಯತ್ನಿಸಿ ದುಷ್ಕರ್ಮಿಗಳು, ಗುರಿ ತಪ್ಪಿ ಪ್ರವೀಣ್ ಅವರನ್ನು ಕೊಲೆಗೈದ್ರಾ?...

ಸುಳ್ಯ: ಇನ್ನೊಬ್ಬ ಕೋಳಿ ವ್ಯಾಪಾರಿಯ ಕೊಲೆಗೆ ಯತ್ನಿಸಿ ದುಷ್ಕರ್ಮಿಗಳು, ಗುರಿ ತಪ್ಪಿ ಪ್ರವೀಣ್ ಅವರನ್ನು ಕೊಲೆಗೈದ್ರಾ? ಸಿಸಿಟಿವಿಯಲ್ಲಿ ಸಿಕ್ಕಿದ ಆ ಸುಳಿವೇನು?

- Advertisement -
- Advertisement -

ಸುಳ್ಯ: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳಿಗೆ ಬಲಿಯಾಗಿ ನಾಲ್ಕು ದಿನಗಳು ಕಳೆದಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಒಂದೊಂದೇ ಸುಳಿವುಗಳು ಲಭ್ಯವಾಗುತ್ತಿವೆ.

ಇದರ ಬೆನ್ನಲ್ಲೇ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ ಎನ್ನಲಾಗಿದೆ. ಆರೋಪಿಗಳಲ್ಲಿ ಒಬ್ಬನಾದ ಶಫೀಕ್ ವ್ಯಕ್ತಿಯೊಬ್ಬನನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಬೆಳ್ಳಾರೆಯ ಮತ್ತೊಬ್ಬ ಕೋಳಿ ವ್ಯಾಪಾರಿಯನ್ನು ದೂರದಿಂದಲೇ ತೋರಿಸಿ ಹೋಗಿದ್ದಾನೆ. ಆದರೆ, ಆತನ ಬದಲಿಗೆ ಪ್ರವೀಣ್ ಹತ್ಯೆ ಆಗಿದ್ದು, ಪ್ರವೀಣ್ ಹತ್ಯೆ ಹಿಂದೆ ಯಾರ ಕೈವಾಡವಿದೆ? ಆ ವ್ಯಾಪಾರಿಯನ್ನು ಕೊಲೆ ಮಾಡಲು ಬಂದು ಪ್ರವೀಣ್‍ನ ಕಥೆ ಮುಗಿಸಿದ್ರಾ? ತಪ್ಪು ಮಾಹಿತಿಯಿಂದ ಈ ಕೊಲೆ ನಡೀತಾ? ಹೀಗೆ ಸಾಲು, ಸಾಲು ಪ್ರಶ್ನೆಗಳು ಎದುರಾಗಿದೆ. ಈ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!