Tuesday, May 14, 2024
Homeತಾಜಾ ಸುದ್ದಿಬಂಟ್ವಾಳ: ನೇತ್ರಾವತಿ ನದಿ ನೀರಿನ ಒಳಹರಿವು ಹೆಚ್ಚಳ: ನೀರಿನ ಮಟ್ಟ 7.5 ಮೀಟರ್‌ಗೆ ಏರಿಕೆ

ಬಂಟ್ವಾಳ: ನೇತ್ರಾವತಿ ನದಿ ನೀರಿನ ಒಳಹರಿವು ಹೆಚ್ಚಳ: ನೀರಿನ ಮಟ್ಟ 7.5 ಮೀಟರ್‌ಗೆ ಏರಿಕೆ

spot_img
- Advertisement -
- Advertisement -

ಬಂಟ್ವಾಳ : ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ನೇತ್ರಾವತಿ ನೀರಿನ ಒಳಹರಿವು ಹೆಚ್ಚಳವಾಗಿದ್ದು ನೀರಿನ ಮಟ್ಟ ಏರಿಕೆಯಾಗಿದೆ. ಬೆಳಿಗ್ಗೆ 6 ಗಂಟೆ ವೇಳೆಗೆ 7.4 ಮಿ.ಮಿ.ಇದ್ದರೆ 9 ಗಂಟೆ ವೇಳೆಗೆ 7.5. ಮಿ.ಮಿ. ಏರಿಕೆಯಾಗಿದ್ದು, ನೀರಿನ ಹರಿವು ಹೆಚ್ಚಾಗುತ್ತಿದೆ.

ನೀರಿನ ವೇಗ ಅತೀ ಹೆಚ್ಚಾಗಿದ್ದು ನೀರಿನ ಮಟ್ಟ ಏರಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿದೆ. ಈಗಾಗಲೇ ಎ.ಎಂ.ಆರ್ ಹಾಗೂ ಎಂ.ಆರ್.ಪಿ.ಎಲ್ ಘಟಕದಿಂದ ನೀರನ್ನು ಹೊರಬಿಡಲಾಗಿದೆ. ಅವರಿಗೆ ಬೇಕಾಗುವ ಮಟ್ಟದಲ್ಲಿ ನೀರನ್ನು ಶೇಖರಣೆ ಮಾಡಿದ ಬಳಿಕ ನೀರನ್ನು ಹೊರಬಿಡಲಾಗಿದೆ.

ನೇತ್ರಾವತಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ತುಂಬೆ ಡ್ಯಾಂ ನಿಂದಲೂ ಹೆಚ್ಚುವರಿ ನೀರು ಹೊರಬಿಡುವ ಬಗ್ಗೆ ಸೈರನ್ ಮಾಡಲಾಗಿದೆ. ನದಿ ಬದಿಯ ತಗ್ಗುಪ್ರದೇಶದ ಜನರು ಎಚ್ಚರಿಕೆ ವಹಿಸುವುದು ಅಗತ್ಯ.

- Advertisement -
spot_img

Latest News

error: Content is protected !!