Thursday, May 9, 2024
Homeಕರಾವಳಿಧರ್ಮಸ್ಥಳ  ಮತ್ತು ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ: ಐದು ಜನ ವಾರಂಟ್ ಆರೋಪಿಗಳು ಬಂಧನ

ಧರ್ಮಸ್ಥಳ  ಮತ್ತು ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ: ಐದು ಜನ ವಾರಂಟ್ ಆರೋಪಿಗಳು ಬಂಧನ

spot_img
- Advertisement -
- Advertisement -

ಬೆಳ್ತಂಗಡಿ : ಜಾಮೀನು ಪಡೆದ ಬಳಿಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಐದು ಜನ ವಾರಂಟ್ ಆರೋಪಿಗಳನ್ನು ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು ಒಂದೇ ದಿನ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ-1:ಬೆಳ್ತಂಗಡಿ JMFC ನ್ಯಾಯಾಲಯ ಸಿ.ಸಿ 2706/2018, DPS cr.no 130/2017,u/s 32,34,38,(a) KE Act ಪ್ರಕರಣದ ವಾರಂಟ್ ಆರೋಪಿ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕುಡುಮಡ್ಕ ನಿವಾಸಿ ಚಂದಪ್ಪ ಗೌಡರ ಮಗ
ಪ್ರದೀಪ್ (25)ಎಂಬಾತ ಸುಮಾರು 6 ತಿಂಗಳಿಂದ  ನ್ಯಾಯಾಲಯಕ್ಕೆ ಹಾಜರಾಗದೆ ಇದ್ದವನನ್ನು ನೆರಿಯಾ ಗ್ರಾಮದ ಅಣಿಯೂರು ಬಸ್ಸು ತಂಗುದಾಣದ ಬಳಿ ಫೆ. 22ರಂದು ರಾತ್ರಿ 8:15 ಗಂಟೆಗೆ ಧರ್ಮಸ್ಥಳ ಪೊಲೀಸರು ಬಂಧಿಸಿ ಬೆಳ್ತಂಗಡಿ JMFC ನ್ಯಾಯಾಧೀಶರ ಮುಂದೆ ಫೆ.23 ರಂದು ಹಾಜರುಪಡಿಸಿದ್ದು ಸೂಕ್ತ ಜಾಮೀನಿನಲ್ಲಿ ಬಿಡುಗಡೆ ಗೊಳಿಸಿದ್ದಾರೆ.

ಪ್ರಕರಣ-2: ಬೆಳ್ತಂಗಡಿ JMFC ನ್ಯಾಯಾಲಯ ಸಿ.ಸಿ 929/2012, u/s 498(A)324,504 ,504,324,ಐಪಿಸಿ ಪ್ರಕರಣದ ವಾರಂಟ್ ಆರೋಪಿ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಗುರಿಯಡ್ಕ ನಿವಾಸಿ ಕೃಷ್ಣ ನಾಯ್ಕ ಮಗ ರಾಮಣ್ಣ ನಾಯ್ಕ(57) ನ್ಯಾಯಾಲಯಕ್ಕೆ ಹಾಜರಾಗದೇ ಇದ್ದವರನ್ನು ಧರ್ಮಸ್ಥಳ ಪೊಲೀಸರು ಕೊಕ್ಕಡ ಗ್ರಾಮದ ಕೊಕ್ಕಡ ಬಸ್ಸು ತಂಗುದಾಣದ ಬಳಿ ಫೆ.23 ರಂದು ಬೆಳಗ್ಗೆ 9:30 ಗಂಟೆಗೆ ಬಂಧಿಸಿ ಮಾನ್ಯ ಬೆಳ್ತಂಗಡಿ JMFC ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಸೂಕ್ತ ಜಾಮೀನಿನಲ್ಲಿ ಬಿಡುಗಡೆ ಗೊಳಿಸಿದ್ದಾರೆ.

ಪ್ರಕರಣ-3: ಬೆಳ್ತಂಗಡಿ JMFC ನ್ಯಾಯಾಲಯ ಸಿ.ಸಿ 112/2019, u/s  447,504,324,ಐಪಿಸಿ ಪ್ರಕರಣದ ವಾರಂಟ್ ಆರೋಪಿ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಕುರುಂಜ ನಿಬಾಸಿ ಮುಂಡ ಗೌಡ ಮಗ ಶಿವಪ್ಪ (43) ಎಂಬಾತ ಸುಮಾರು 4 ತಿಂಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದವರನ್ನು ಫೆ.23 ರಂದು ಬೆಳಗ್ಗೆ 6:15 ಗಂಟೆಗೆ ಶಿಬಾಜೆ ಗ್ರಾಮದ ಶಿಬಾಜೆ ಬಸ್ಸು ತಂಗುದಾಣದ ಬಳಿ ಧರ್ಮಸ್ಥಳ ಪೊಲೀಸರು ಬಂಧಿಸಿ ಬೆಳ್ತಂಗಡಿ JMFC ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಸೂಕ್ತ ಜಾಮೀನಿನಲ್ಲಿ ಬಿಡುಗಡೆ ಗೊಳಿಸಿದ್ದಾರೆ.

ಪ್ರಕರಣ-4:ಬೆಳ್ತಂಗಡಿ ನ್ಯಾಯಲಯ  ಸಿ ಸಿ ನಂಬರ್ 329/2023 ಕಲಂ.138 NI Act ಪ್ರಕರಣದ ವಾರಂಟ್ ಆರೋಪಿ ಮಂಗಳೂರಿನ ಉಳ್ಳಾಲ ನಿವಾಸಿ ಮಹಮ್ಮದ್ ನಿಸಾರ್(35) ಎಂಬಾತನನ್ನು ಫೆ. 23 ರಂದು ಬೆಳ್ತಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದು ಸೂಕ್ತ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ.

ಪ್ರಕರಣ-5:ಬೆಳ್ತಂಗಡಿ ನ್ಯಾಯಲಯ  ಸಿ ಸಿ ನಂಬ್ರ , 279/19, 280/19 ಕಲಂ.138 NI Act 2 ಪ್ರಕರಣದಲ್ಲಿ ಶಿಕ್ಷೆಗೊಳಪಟ್ಟ ವಾರಂಟ್ ಆರೋಪಿ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಹಿರೆಬಂಡಾಡಿ ನಿವಾಸಿ ಹೆಚ್.ಯೂಸುಫ್ ಮಗ ನಿವಾಸಿ ಹೆಚ್ ಕೆ ಇಬ್ರಾಹಿಂ(50) ಎಂಬಾತನನ್ನು ಫೆ. 23 ರಂದು ಬೆಳ್ತಂಗಡಿ ಪೊಲೀಸರು ಉಪ್ಪಿನಂಗಡಿ ಎಂಬಲ್ಲಿಂದ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಶಿಕ್ಷೆ ಜಾರಿಗೊಳಿಸಿ ಮಂಗಳೂರು ಸಬ್ ಜೈಲಿಗೆ ಕಳುಹಿಸಿದ್ದಾರೆ.

ಪತ್ತೆ ಕಾರ್ಯಾಚರಣೆ; ಬೆಳ್ತಂಗಡಿ ಪೊಲೀಸ್ ಠಾಣೆಯ ವಾರೆಂಟ್ ಆರೋಪಿಗಳ ಬಂಧನಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿಜಿ ಸುಬ್ಬಪುರ ಮಠ ನಿರ್ದೇಶನದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ ನೇತೃತ್ವದ ಸಿಬ್ಬಂದಿ ವೃಷಭ ಮತ್ತು ಬಸವರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಧರ್ಮಸ್ಥಳ ಪೊಲೀಸ್ ಠಾಣೆಯ ವಾರಂಟ್ ಆರೋಪಿಗಳ ಬಂಧನಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ವಸಂತ ರಾಮ ಆಚಾರ್ ನಿರ್ದೇಶನದಂತೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ಸಿಬ್ಬಂದಿ ರಾಜೇಶ್, ಪ್ರಶಾಂತ್, ಗೋವಿಂದ ರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -
spot_img

Latest News

error: Content is protected !!