Saturday, April 27, 2024
Homeಅಪರಾಧವೃತ್ತಿಯಲ್ಲಿ ಡಾಕ್ಟರ್ ಎಂಬುದಾಗಿ ನಂಬಿಸಿ ವಂಚನೆ; ಮಲ್ಪೆ ಮೂಲದ ಮಹಿಳೆಗೆ ಲಕ್ಷಾಂತರ ರೂ ವಂಚನೆ

ವೃತ್ತಿಯಲ್ಲಿ ಡಾಕ್ಟರ್ ಎಂಬುದಾಗಿ ನಂಬಿಸಿ ವಂಚನೆ; ಮಲ್ಪೆ ಮೂಲದ ಮಹಿಳೆಗೆ ಲಕ್ಷಾಂತರ ರೂ ವಂಚನೆ

spot_img
- Advertisement -
- Advertisement -

ಉಡುಪಿ: ಮಲ್ಪೆ ಮೂಲದ ಮಹಿಳೆಯೋರ್ವರಿಗೆ ಅಪರಿಚಿತ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂಬುದಾಗಿ ನಂಬಿಸಿ ಮಹಿಳೆಯಿಂದ ಲಕ್ಷಾಂತರ ರೂಪಾಯಿ ವಂಚನೆಗೈದ ಘಟನೆ ಬೆಳಕಿಗೆ ಬಂದಿದೆ.

ವಂಚನೆಗೊಂಡ ಮಹಿಳೆ ಮಲ್ಪೆ ನಿವಾಸಿ ವಿನಿತಾ. ಮಹಿಳೆಗೆ ಜನವರಿ 24ರಂದು ವಾಟ್ಸಪ್ ನಲ್ಲಿ ವ್ಯಕ್ತಿಯೊಬ್ಬ ಪರಿಚಯ ಆಗಿದ್ದು ನಿಮ್ಮ ಬಿಸಿನೆಸ್ನಲ್ಲಿ ಪಾಲುದಾರಿಕೆ ಮಾಡ್ತೀನಿ ಎಂದು ತಿಳಿಸಿದ್ದ. ಅಷ್ಟೇಅಲ್ಲದೇ ತಾನು ಲಂಡನ್ನಲ್ಲಿ ಡಾಕ್ಟರ್ ಆಗಿದ್ದು, ಸದ್ಯದಲ್ಲೇ ಭಾರತಕ್ಕೆ ಬರಲು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದ. ಫೆ.2ರಂದು ಬೇರೊಂದು ನಂಬರಲ್ಲಿ ಫೋನ್ ಬಂದಿತ್ತು. ದೆಹಲಿ ಏರ್ಪೋಟ್್ರ ಕಚೇರಿಯಿಂದ ಫೋನ್ ಮಾಡುತ್ತಿದ್ದೇನೆಂದು ಹೇಳಿದ್ದ ಆ ವ್ಯಕ್ತಿ ಲಂಡನ್ ಡಾಕ್ಟರಿನ ಫ್ರೆಂಡ್ ಎಂದು ಹೇಳಿದ್ದ. ಡಾಕ್ಟರನ್ನು ಏರ್ಪೋಟ್್ರ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವರನ್ನು ಬಿಡಿಸಿ ತರಲು ದಂಡ ಕಟ್ಟಬೇಕಾಗಿದೆ ಎಂದಿದ್ದ.

ನಂತರದಲ್ಲಿಯೂ ಆ ಮಹಿಳೆಗೆ ಫೋನ್ ಬಂದಿದ್ದು, ಡಾಕ್ಟರ್ ಏರ್ ಪೋರ್ಟ್ ಸಿಕ್ಕಿಬಿದ್ದಿದ್ದಾರೆ. ದಂಡ ಕಟ್ಟಲು ಹಣ ಇಲ್ಲ, ಸಹಾಯ ಮಾಡಬಹುದೇ ಎಂದು ಆ ವ್ಯಕ್ತಿ ಕೇಳಿಕೊಂಡಿದ್ದ. ಅದರಂತೆ, ವಿನಿತಾ ಅವರು ಫೆ.16ರಿಂದ 20ರ ನಡುವೆ ತನ್ನ ಕೆನರಾ ಬ್ಯಾಂಕ್ ಖಾತೆಯಿಂದ ಫೋನ್ ಪೇ ಮೂಲಕ 4.96 ಲಕ್ಷ ರೂ ಹಣ ಕಳಿಸಿದ್ದರು. ಹಣ ಕಳಿಸಿದ ಬಳಿಕ ಫೋನ್ ಸಂಪರ್ಕ ಕಡಿತ ಆಗಿತ್ತು. ಇದರಿಂದ ಮೋಸದ ಅರಿವಾದ ಮಹಿಳೆ ಮಲ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!