Saturday, May 11, 2024
Homeತಾಜಾ ಸುದ್ದಿಮೂರು ಮಕ್ಕಳನ್ನು ಹೊಂದಿರುವ ಶಿಕ್ಷಕರಿಗೆ ಶೋಕಾಸ್ ನೋಟಿಸ್ : ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 989 ಅಧ್ಯಾಪಕರು

ಮೂರು ಮಕ್ಕಳನ್ನು ಹೊಂದಿರುವ ಶಿಕ್ಷಕರಿಗೆ ಶೋಕಾಸ್ ನೋಟಿಸ್ : ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 989 ಅಧ್ಯಾಪಕರು

spot_img
- Advertisement -
- Advertisement -

ಮಧ್ಯಪ್ರದೇಶ:  ಮೂರು ಮಕ್ಕಳನ್ನು ಹೊಂದಿರುವ ಶಿಕ್ಷಕರಿಗೆ ಮಧ್ಯಪ್ರದೇಶದ ವಿದಿಶಾದಲ್ಲಿ ನೋಟಿಸ್ ನೀಡಿದ್ದಾರೆ.ಮೂರು ಮಕ್ಕಳನ್ನು ಹೊಂದಿರುವ 989 ಶಿಕ್ಷಕರಿಗೆ, ಅಲ್ಲಿನ ಹಿರಿಯ ಅಧಿಕಾರಿ ಶೋಕಾಸ್ ನೋಟಿಸ್ ಜಾರಿ ನೀಡಿದ್ದಾರೆ. ಜನವರಿ 26, 2001ರ ಕುಟುಂಬ ಕಲ್ಯಾಣ ಆದೇಶದ ಪ್ರಕಾರ ಸರ್ಕಾರಿ ನೌಕರರು 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ.

ಆದ್ರೆ ವಿದಿಶಾದ 989 ಶಿಕ್ಷಕರಿಗೆ ಮೂವರು ಮಕ್ಕಳಿರುವುದು ದೃಢಪಟ್ಟಿದೆ. ಈ ಸಂಬಂಧ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ 15 ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿತ್ತು. ಆದರೆ ಇದುವರೆಗೆ 189 ಶಿಕ್ಷಕರು ಮಾತ್ರ ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಗೆ ಸ್ಪಂದಿಸಿದ್ದಾರೆ.

ವಿದಿಶಾ ಶಿಕ್ಷಣ ಇಲಾಖೆಯಲ್ಲಿ ಸುಮಾರು 7 ಸಾವಿರ ಶಿಕ್ಷಕರಿದ್ದಾರೆ. ಶಿಕ್ಷಣ ಇಲಾಖೆಯ ಶೋಕಾಸ್ ನೋಟಿಸ್‌ಗೆ ಉತ್ತರವಾಗಿ ಶಿಕ್ಷಕರು ವಿವಿಧ ರೀತಿಯಲ್ಲಿ ವಾದ ಮಂಡಿಸಿದ್ದಾರೆ. ಕೆಲವರು ಮಗುವನ್ನು ಸಂಬಂಧಿಕರು ದತ್ತು ತೆಗೆದುಕೊಂಡ ಬಗ್ಗೆ ಉಲ್ಲೇಖಿಸಿದರೆ, ಕೆಲವರು ಟಿಟಿ ಆಪರೇಷನ್ ವಿಫಲವಾಗಿದೆ ಎಂದು ಹೇಳಿದ್ದಾರೆ.

ಮೂರು ಮಕ್ಕಳನ್ನು ಹೊಂದಿರುವ ಬಗ್ಗೆ ಶಿಕ್ಷಕರು ನೀಡಿರುವ ಕಾರಣಗಳನ್ನು ಪರಿಶೀಲಿಸಲು ಇಲಾಖಾ ಅಧಿಕಾರಿ ಬಲ್ವೀರ್ ತೋಮರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಅವರ ನೌಕರಿಯೇ ಹೋದರೂ ಅಚ್ಚರಿಯಿಲ್ಲ ಅಂತಾ ಹೇಳಲಾಗ್ತಿದೆ.

- Advertisement -
spot_img

Latest News

error: Content is protected !!