Thursday, June 4, 2026
Homeತಾಜಾ ಸುದ್ದಿಹೆಬ್ರಿ: ವಾಲಿಬಾಲ್ ಆಟಗಾರ ನೇಣು ಬಿಗಿದುಕೊಂಡು ಆತ್ಮಹತ್ಯೆ

ಹೆಬ್ರಿ: ವಾಲಿಬಾಲ್ ಆಟಗಾರ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಹೆಬ್ರಿ: ಪ್ರತಿಭಾನ್ವಿತ ವಾಲಿಬಾಲ್ ಆಟಗಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಹೆಬ್ರಿ ಕೆಳಪೇಟೆ ಶೇರಿಗಾರ್ ಬೆಟ್ಟು ನಿವಾಸಿ ಪ್ರಶಾಂತ್ ಯಾನೆ ಪಚ್ಚು(30) ನೇಣಿಗೆ ಶರಣಾದ ಯುವಕ.

ಭೂತ ಕೋಲ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಠಾಸೆ ಬಾರಿಸುವುದರಲ್ಲಿ ನಿಪುಣರಾಗಿದ್ದ ಇವರು ಉತ್ತಮ ವಾಲಿಬಾಲ್ ಆಟಗಾರಾಗಿದ್ದರು. ಹೆಬ್ರಿ ಎರ್ಲಪಾಡಿ ವಾಲಿಬಾಲ್ ಟೀಂ ನಲ್ಲಿ ಆಡುತ್ತಿದ್ದರು ಎನ್ನಲಾಗಿದೆ. ಇವರ ಆತ್ಮಹತ್ಯೆಗೆ ಕಾರಣವೇನು ಎಂಬುವುದುತಿಳಿದು ಬಂದಿಲ್ಲ. ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!