ವಿಟ್ಲ; ದಿನಾಂಕ 06.05.2019 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಶಿಷ್ಠ ಜಾತಿಗೆ ಸೇರಿದ ವ್ಯಕ್ತಿಯೊಬ್ಬರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜಾತಿನಿಂದನೆ ಮಾಡಿ, ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆಗೆ ಸಂಬಂಧಿದಂತೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ, ಆಗಿನ ತನಿಖಾಧಿಕಾರಿಗಳಾದ ಸೈದುಲ್ ಅಡಾವತ್, ಎ ಎಸ್ ಪಿ ಬಂಟ್ವಾಳ ಉಪ ವಿಭಾಗ ರವರು ತನಿಖೆ ನಡೆಸಿ, ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ, ಆರೋಪಿತರ ವಿರುದ್ದ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಸದ್ರಿ ಪ್ರಕರಣವು ಮಾನ್ಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರಿನಲ್ಲಿ ವಿಚಾರಣೆ ನಡೆದು ದಿನಾಂಕ:30/01/2026 ರಂದು ಆರೋಪಿಯಾದ ನಾರಾಯಣ ಗೌಡ ಎಂಬವರಿಗೆ ನ್ಯಾಯಾಲಯವು ಕಲಂ 447,324,ಮತ್ತು 504 IPC ಅಡಿಯಲ್ಲಿ ಶಿಕ್ಷೆಯನ್ನು ಪ್ರಕಟಿಸಿ 500, 10,000 ಮತ್ತು10,000 ದಂಡ ಪಾವತಿಸಲು ಒಂದು ವೇಳೆ ದಂಡ ಪಾವತಿಸಲು ನಿರಾಕರಿಸಿದಲ್ಲಿ ಕ್ರಮವಾಗಿ 3 ತಿಂಗಳು, 6 ತಿಂಗಳು, 6 ತಿಂಗಳು ಕಾರಗೃಹ ವಾಸಕ್ಕೆ ಅಂತಿಮ ಆದೇಶ ಹೊರಡಿಸಿರುತ್ತದೆ. ಈ ಪ್ರಕರಣದ ವಿಚಾರಣಾ ಸಮಯದಲ್ಲಿ ಮಾನ್ಯ ಸರ್ಕಾರಿ ಅಭಿಯೋಜಕರಾದ ಜ್ಯೋತಿ ನಾಯ್ಕ ರವರು ಸರ್ಕಾರದ ಪರವಾಗಿ ವಾದವನ್ನು ಮಂಡಿಸಿರುತ್ತಾರೆ.
ದಿನಾಂಕ 07-10-2022 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೋರ್ವರ ಜೊತೆ ಆರೋಪಿಯು ಅನುಚಿತವಾಗಿ ವರ್ತಿಸಿ, ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಒಡ್ಡಿದ ಘಟನೆಗೆ ಸಂಬಂಧಿಸಿದಂತೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ದಿನಾಂಕ :11.10.2022 ರಂದು ದಾಖಲಾಗಿದ್ದ ವಿಟ್ಲ ಪೊಲೀಸ್ ಠಾಣಾ ಅಕ್ರ: 157/2022 ಕಲಂ Scheduled Castes and Scheduled Tribes (Prevention of Atrocities) Act3(1)(r)(s), 3(2)(v), 3(2)(va) ಮತ್ತು Indian Penal Code 354,506 ನೇದರಂತೆ ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಬಂಟ್ವಾಳ ಉಪ ವಿಭಾಗ ಉಪವಿಭಾಗಾಧಿಕಾರಿ ಮಾನ್ಯ ಪ್ರತಾಪ್ ಸಿಂಗ್ ಥೋರಾಟ್ ಡಿ ವೈ ಎಸ್ ಪಿ ರವರು ಘಟನೆಯ ಬಗ್ಗೆ ತನಿಖೆ ನಡೆಸಿ ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಆರೋಪಿತರ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು ಈ ಪ್ರಕರಣವು ಮಾನ್ಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರಿನಲ್ಲಿ ವಿಚಾರಣೆ ನಡೆದು ದಿನಾಂಕ 20/02/2026ರಂದು ಆರೋಪಿಯಾದ ಉಸ್ಮಾನ್ ಎಂಬವರಿಗೆ ಮಾನ್ಯ ನ್ಯಾಯಾಲಯವು ಕಲಂ 354,506 IPC ಮತ್ತು 3(1)(w), 3(2)(va) SC/ST ಕಾಯ್ದೆಯಡಿಯಲ್ಲಿ ಶಿಕ್ಷೆ ವಿಧಿಸಿದ್ದು(Convicted) ಆರೋಪಿಗೆ ಒಂದು ವರ್ಷ ಸರಳ ಜೈಲು ಶಿಕ್ಷೆ ಮತ್ತು ರೂ. 10,000. ದಂಡ ಪಾವತಿಸಲು ವಿಫಲವಾದರೆ, ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿರುತ್ತದೆ. ಐಪಿಸಿ ಕಲಂ 506 ನೇದಕ್ಕೆ ಆರೋಪಿಗೆ ಆರು ತಿಂಗಳ ಸರಳ ಜೈಲು ಶಿಕ್ಷೆ ಮತ್ತು ರೂ. 5,000. ದಂಡ ಪಾವತಿಸಲು ಆದೇಶಿಸಿದೆ ವಿಫಲವಾದರೆ, ಹೆಚ್ಚುವರಿಯಾಗಿ 15 ದಿನಗಳ ಜೈಲು ಶಿಕ್ಷೆ ವಿಧಿಸಿ ಮಾನ್ಯ ನ್ಯಾಯಾಲಯವು ಅಂತಿಮ ಆದೇಶ ಮಾಡಿರುತ್ತದೆ. ಈ ಪ್ರಕರಣದ ವಿಚಾರಣಾ ಸಮಯದಲ್ಲಿ ಮಾನ್ಯ ಸರ್ಕಾರಿ ಅಭಿಯೋಜಕರಾದ ಜ್ಯೋತಿ ನಾಯ್ಕ ರವರು ಸರ್ಕಾರದ ಪರವಾಗಿ ವಾದವನ್ನು ಮಂಡಿಸಿರುತ್ತಾರೆ.


