Friday, July 17, 2026
Homeಕರಾವಳಿಮಂಗಳೂರುವಿಟ್ಲ: ಓಮ್ನಿ ಕಾರು ಮತ್ತು ಕೆಎಸ್ಸಾರ್ಟಿಸಿ ಬಸ್ ಮಧ್ಯೆ ಭೀಕರ ಅಪಘಾತ; ಓಮ್ನಿ ಚಾಲಕ ಸಾವು

ವಿಟ್ಲ: ಓಮ್ನಿ ಕಾರು ಮತ್ತು ಕೆಎಸ್ಸಾರ್ಟಿಸಿ ಬಸ್ ಮಧ್ಯೆ ಭೀಕರ ಅಪಘಾತ; ಓಮ್ನಿ ಚಾಲಕ ಸಾವು

- Advertisement -
- Advertisement -

ವಿಟ್ಲ: ಓಮ್ನಿ ಕಾರು ಮತ್ತು ಕೆಎಸ್ಸಾರ್ಟಿಸಿ ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಓಮ್ನಿ ಚಾಲಕ ಸಾವನ್ನಪ್ಪಿರುವ ಘಟನೆ ವಾಯಿ ಸಮೀಪ ಮುಳಿಯ ಎಂಬಲ್ಲಿ ಭಾನುವಾರ ಸಂಭವಿಸಿದೆ.

ಮೈರ ನಿವಾಸಿ ಮೋನಪ್ಪ ಕುಲಾಲ್ ಮೃತ ಕಾರು ಚಾಲಕ. ಮೋನಪ್ಪರ ಪತ್ನಿ ಲಲಿತಾ ಮತ್ತು ಜೊತೆಗಿದ್ದ ರಮಣಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.


ವಿಟ್ಲದಿಂದ ಪೆರುವಾಯಿ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಮತ್ತು ಪಕಳಕುಂಜದಿಂದ ವಿಟ್ಲ ಕಡೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮುಳಿಯ ಎಂಬಲ್ಲಿ ಮುಖಾಮುಖಿ ಢಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಓಮ್ನಿಯಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದರು. ಈ ಪೈಕಿ ಮೋನಪ್ಪ ಕುಲಾಲ್ ಮೃತಪಟ್ಟಿದ್ದಾರೆ. ವಿಟ್ಲ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

- Advertisement -

Latest News

error: Content is protected !!