Thursday, June 4, 2026
Homeಕರಾವಳಿಉಡುಪಿಪಡುಬಿದ್ರಿ: ಆರ್‌ಎಸ್‌ಎಸ್‌ನ ಹಿರಿಯ ಸ್ವಯಂಸೇವಕ ವೇದಮೂರ್ತಿ ವಿಠಲ ಭಟ್ ನಿಧನ

ಪಡುಬಿದ್ರಿ: ಆರ್‌ಎಸ್‌ಎಸ್‌ನ ಹಿರಿಯ ಸ್ವಯಂಸೇವಕ ವೇದಮೂರ್ತಿ ವಿಠಲ ಭಟ್ ನಿಧನ

- Advertisement -
- Advertisement -

ಪಡುಬಿದ್ರಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕರಾಗಿ, ಹೆಜಮಾಡಿ ಮಲ್ಯರ ಮಠ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಿರುವ ವೇದಮೂರ್ತಿ ವಿಠಲ್ ಭಟ್ ಇಂದು ನಿಧನರಾದರು.

ಅವಿವಾಹಿತರಾಗಿದ್ದ ಅವರಿಗೆ 89 ವರ್ಷ ವಯಸ್ಸಾಗಿತ್ತು. ಹೆಜಮಾಡಿ ಗ್ರಾಮವೂ ಸೇರಿದಂತೆ ಕಾಪು ತಾಲೂಕಿನಲ್ಲಿ ಸಂಘದ ಶಾಖೆಗಳೂ ಸೇರಿದಂತೆ ಹಿಂದು ಸಂಘಟನೆಯ ಕೆಲಸ ಕಾರ್ಯಗಳಿಗೆ ಅಡಿಪಾಯ ಹಾಕುವಲ್ಲಿ ಅವರ ಪಾತ್ರ ಅನನ್ಯವಾದುದು. ಅಯೋಧ್ಯಾ ಹೋರಾಟದಲ್ಲಿ ಭಾಗವಹಿಸಿದ್ದ ಅವರು ಕರಸೇವೆಯಲ್ಲಿಯೂ ಪಾಲ್ಗೊಂಡಿದ್ದರು. ಜನಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಠಲ್ ಭಟ್ ರವರು ಡಾ! ವಿ.ಎಸ್ ಆಚಾರ್ಯ, ಕರಂಬಳ್ಳಿ ಸಂಜೀವ ಶೆಟ್ಟಿ, ಉಡುಪಿ ಸೋಮಶೇಖರ ಭಟ್ ಮುಂತಾದವರ ಒಡನಾಡಿಯಾಗಿದ್ದರು. ಪ್ರಕೃತಿ ಪ್ರೇಮಿಯಾಗಿದ್ದ ವಿಠಲ್ ಭಟ್ ರವರು ರಸ್ತೆಯ ಇಕ್ಕೆಲಗಳಲ್ಲಿ ಅನೇಕ ಮರಗಳನ್ನು ನೆಟ್ಟಿದ್ದರು.

- Advertisement -

Latest News

error: Content is protected !!