Saturday, June 6, 2026
Homeಕರಾವಳಿಉಡುಪಿಉಡುಪಿ: ಸಾಧಕ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಶಾಸಕರಿಂದ ಸನ್ಮಾನ

ಉಡುಪಿ: ಸಾಧಕ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಶಾಸಕರಿಂದ ಸನ್ಮಾನ

- Advertisement -
- Advertisement -

ಉಡುಪಿ: ಎಸ್.ಎಸ್.ಎಲ್‌.ಸಿ. ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ಅತ್ಯುತ್ತಮ ಸಾಧನೆಗೈದು ಉಡುಪಿಯ ಕೀರ್ತಿ ಹೆಚ್ಚಿಸಿದ ಇಬ್ಬರು ವಿದ್ಯಾರ್ಥಿಗಳ ಮನೆಗಳಿಗೆ ಶಾಸಕ ರಘುಪತಿ ಭಟ್ ಅವರು ಭೇಟಿ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಮನೆಯಲ್ಲೇ ಅವರನ್ನು ಸನ್ಮಾನಿಸಿದ ಶಾಸಕರು  CET ಹಾಗೂ NEET ಸೇರಿದಂತೆ ಎರಡು ವರ್ಷದ ವಿದ್ಯಾಭ್ಯಾಸವನ್ನು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಮಲ್ಪೆ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿ ಕಲ್ಮಾಡಿಯ ಕಲ್ಲಪ್ಪ ಹಾಗೂ ಲಲಿತ ದಂಪತಿಯ ಮಗನಾದ ಪುನೀತ್ ನಾಯ್ಕ್ ಹಾಗೂ ಉಡುಪಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಂಜಿಬೆಟ್ಟು ನಿವಾಸಿ ಪ್ರಕಾಶ್ ದೇವಾಡಿಗ ಹಾಗೂ ವಸಂತಿ ದಂಪತಿಗಳ ಮಗಳಾದ ಗಾಯತ್ರಿ ರಾಜ್ಯಕ್ಕೇ ಟಾಪರ್ಸ್ ಎನಿಸಿಕೊಂಡಿದ್ದಾರೆ. ಇವರಿಬ್ಬರೂ ಸರಕಾರಿ ಶಾಲೆಯಲ್ಲಿ ಕಲಿತಿದ್ದರು ಎಂಬುದು ಗಮನಾರ್ಹ ಸಂಗತಿ.

- Advertisement -

Latest News

error: Content is protected !!