Wednesday, July 3, 2024
HomeWorldದಾಖಲೆ ಬರೆದ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಪೋಸ್ಟ್

ದಾಖಲೆ ಬರೆದ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಪೋಸ್ಟ್

spot_img
- Advertisement -
- Advertisement -

ಮುಂಬೈ: ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಇಡೀ ತಂಡ ಟ್ರೋಫಿ ಹಿಡಿದು ಸಂಭ್ರಮಾಚರಿಸುತ್ತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. 

ಫೋಟೋದೊಂದಿಗೆ ಈ ದಿನಕ್ಕಿಂತಲೂ ಉತ್ತಮ ದಿನಕ್ಕೆ ನಾನೆಂದೂ ಕನಸು ಕಂಡಿರಲಿಲ್ಲ. ದೇವರು ದೊಡ್ಡವರು. ನಾನೀಗ ಕೃತಜ್ಞತೆಯಿಂದ ತಲೆ ತಗ್ಗಿಸುತ್ತಿದ್ದೇನೆ. ಕೊನೆಗೂ ನಾವಿದನ್ನು ಸಾಧಿಸಿಬಿಟ್ಟೆವು. ಜೈ ಹಿಂದ್‌ ಎಂದು ಒಂದು ಸಾಲನ್ನೂ ಬರೆದುಕೊಂಡಿದ್ದರು. ಇದೀಗ ಈ ಚಿತ್ರಕ್ಕೆ ಬರೋಬ್ಬರಿ 18 ಮಿಲಿಯನ್‌ಗೂ ಹೆಚ್ಚು ಲೈಕ್ಸ್‌ ಬಂದಿದೆ.

ಅಷ್ಟೇ ಅಲ್ಲದೆ ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿರುವ ವಿರಾಟ್ ಅವರ ಪೋಸ್ಟ್ ಇನ್ಸ್ಟಾಗ್ರಾಮ್‌ ನಲ್ಲಿ ಹೆಚ್ಚು ಇಷ್ಟಪಟ್ಟ ಭಾರತದ ಪೋಸ್ಟ್ ಆಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ – ಕಿಯಾರಾ ಅಡ್ವಾಣಿ ಅವರ ಮದುವೆಯ ಫೋಟೋ ಅತಿ ಹೆಚ್ಚು ಲೈಕ್ ಪಡೆದ ಫೋಟೋ ಆಗಿತ್ತು. ಅವರ ಫೋಟೊ 16 ಮಿಲಿಯನ್ ಲೈಕ್ಸ್ ಪಡೆದಿತ್ತು. ಆದರೆ ಇದೀಗ ವಿರಾಟ್ ಪೋಸ್ಟ್ ಅದನ್ನು ಮೀರಿ 18 ಮಿಲಿಯನ್ ಲೈಕ್ಸ್ ಪಡೆದಿರುತ್ತದೆ.

- Advertisement -
spot_img

Latest News

error: Content is protected !!