Thursday, June 26, 2025
Homeಕ್ರೀಡೆಮೈದಾನದಿಂದಲೇ ಹೆಂಡತಿಯ ಕ್ಷೇಮ ವಿಚಾರಿಸಿದ ಕೊಹ್ಲಿ: ವೈರಲ್ ಆಯ್ತು ವಿಡಿಯೋ

ಮೈದಾನದಿಂದಲೇ ಹೆಂಡತಿಯ ಕ್ಷೇಮ ವಿಚಾರಿಸಿದ ಕೊಹ್ಲಿ: ವೈರಲ್ ಆಯ್ತು ವಿಡಿಯೋ

spot_img
- Advertisement -
- Advertisement -

ದುಬೈ: ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಈಗ ಐಪಿಎಲ್‌ನಲ್ಲಿ ಆಡುವುದರಲ್ಲಿ ಬಿಜಿಯಾಗಿದ್ದರೆ, ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೂಡ ಯುಎಇಯಲ್ಲಿ ಐಪಿಎಲ್ ಬಯೋ-ಬಬಲ್‌ನಲ್ಲೇ ಇದ್ದಾರೆ. ಗರ್ಭಿಣಿಯಾಗಿರುವ ಅನುಷ್ಕಾ ಶರ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಸಲುವಾಗಿ ಕೊಹ್ಲಿ ಅವರನ್ನು ಅರಬ್ ರಾಷ್ಟ್ರಕ್ಕೂ ಜತೆಯಲ್ಲೇ ಕರೆದುಕೊಂಡಿದ್ದಾರೆ. ಈ ನಡುವೆ ಅವರಿಗೆ ಮೈದಾನದಲ್ಲಿದ್ದರೂ ಪತ್ನಿಯದ್ದೇ ಚಿಂತೆಯಾಗಿದೆ. ಕಳೆದ ಭಾನುವಾರ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆ ಕೊಹ್ಲಿ, ಗರ್ಭಿಣಿ ಪತ್ನಿ ಅನುಷ್ಕಾಗೆ, ಊಟ ಮಾಡಿದ್ಯಾ ಎಂದು ಕೈಸನ್ನೆಯಿಂದಲೇ ಪ್ರಶ್ನಿಸಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.

ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಕೊಹ್ಲಿ ಹಸಿರು ಜೆರ್ಸಿಯೊಂದಿಗೆ ಸಹ-ಆಟಗಾರರ ಜತೆ ಮೈದಾನದಲ್ಲಿ ಸಿದ್ಧತೆ ನಡೆಸುತ್ತಿದ್ದರೆ, ಅತ್ತ ಅನುಷ್ಕಾ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕೆಂಪು ಧಿರಿಸಿನಲ್ಲಿದ್ದರು. ಈ ವೇಳೆ ಕೊಹ್ಲಿ ಕೈಸನ್ನೆಯ ಮೂಲಕ ಅನುಷ್ಕಾಗೆ, ಊಟ ಮಾಡಿದ್ಯಾ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅನುಷ್ಕಾ ಕೂಡ, ‘ಆಯ್ತು, ಆಯ್ತು’ ಎಂಬ ರೀತಿಯಲ್ಲಿ ಸನ್ನೆ ಮಾಡಿದ್ದಾರೆ. ಅದರ ಬೆನ್ನಲ್ಲೇ ಇಬ್ಬರೂ ಜೋರಾಗಿ ನಕ್ಕಿದ್ದಾರೆ.

ಈ ಸ್ಟಾರ್ ದಂಪತಿಯ ನಡುವಿನ ಈ ಕೈಸನ್ನೆಯ ಸಂಭಾಷಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಹೃದಯ ಗೆದ್ದಿದೆ. ಅನುಷ್ಕಾ ಶರ್ಮ ಜನವರಿ ವೇಳೆಗೆ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದಾರೆ.

- Advertisement -
spot_img

Latest News

error: Content is protected !!