ಅಮೇರಿಕಾ : ಕೆಲವೊಮ್ಮೆ ಪ್ರಕೃತಿಯಲ್ಲಿ ನಡೆಯುವ ವಿಸ್ಮಯಗಳನ್ನು, ಕೌತುಕಗಳನ್ನು ನಂಬೋದಕ್ಕೆ ಸಾಧ್ಯಾವಾಗೋದೇ ಇಲ್ಲ. ಕೆಲವೊಮ್ಮೆ ಹೀಗೂ ಆಗುತ್ತಾ ಅನ್ನೋ ಅನುಮಾನ ಮೂಡುತ್ತೆ. ಇಂತಹದ್ದೇ ಒಂದು ವಿಡಿಯೋ ಇಲ್ಲಿದೆ ನೋಡಿ..
ಅಷ್ಟಕ್ಕೂ ವಿಷ್ಯ ಏನಪ್ಪಾ ಅಂದ್ರೆ ಒಂದು ಪಕ್ಷಿಯು ತನ್ನ ಬಾಯಿಯಲ್ಲಿ ಮೀನನ್ನು ಹಿಡಿದು ಆಕಾಶದಲ್ಲಿ ಹಾರುತ್ತ ಹೋಗುತ್ತಿದೆ. ಈ ವಿಡಿಯೋ ಯುಎಸ್’ಎ ದ ಮಾಯರ್ಟಲ್ ಬೀಚ್ ನಲ್ಲಿ ಶೂಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಬೇಟೆಯನ್ನಾಡಿದ ಪಕ್ಷಿ ತನ್ನ ಕಾಲಿನಲ್ಲಿ ಮೀನು ಹಿಡಿದುಕೊಂಡು ಹಾರುತ್ತಿದೆ.
ಈ ವಿಡಿಯೋ ನೋಡಿದ ಹಲವರು ಆಶ್ಚರ್ಯ ಚಕಿತರಾಗಿದ್ದಾರೆ. ಇಂಥ ಅಸಾಮಾನ್ಯವಾದ ದೃಶ್ಯವನ್ನು ದಕ್ಷಿಣ ಕೈರೋಲಿನ್ ನ ಬರ್ಬೇಜ್ ಎಂಬವರು ಸೆರೆ ಹಿಡಿದಿದ್ದಾರೆ. ಟ್ವಿಟರ್ ನಲ್ಲಿ ಟ್ರ್ಯಾಕಿಂಗ್ ಶಾರ್ಕ್ ಅನ್ನೋ ಟ್ವಿಟರ್ ಖಾತೆಯಲ್ಲಿ ವಿಡಿಯೋ ಶೇರ್ ಆಗಿದೆ . ಇಲ್ಲಿ ಇದು 2.27 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ. ಇನ್ನು ಇದು ಯಾವ ಪಕ್ಷಿ? ಆ ಪಕ್ಷಿ ಹಿಡಿದುಕೊಂಡಿರೋದು ಶಾರ್ಕ್ ಇರಬಹುದಾ? ಅಂತಾ ಕ್ಯಾಫ್ಶನ್ ಕೂಡ ಕೊಡಲಾಗಿದೆ.