Saturday, June 13, 2026
Homeಕರಾವಳಿಶಾಸಕ ಸಂಜೀವ ಮಠಂದೂರು ಅವರಿಗೂ ನನಗೂ ಸಂಬಂಧವಿಲ್ಲ;ವೈರಲ್ ಫೋಟೋ ಕುರಿತಂತೆ ಮಹಿಳೆ ಸ್ಪಷ್ಟನೆ

ಶಾಸಕ ಸಂಜೀವ ಮಠಂದೂರು ಅವರಿಗೂ ನನಗೂ ಸಂಬಂಧವಿಲ್ಲ;ವೈರಲ್ ಫೋಟೋ ಕುರಿತಂತೆ ಮಹಿಳೆ ಸ್ಪಷ್ಟನೆ

- Advertisement -
- Advertisement -

ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ ಪುತ್ತೂರು ಶಾಸಕರ ಜೊತೆ ಹರಿದಾಡಿದ ಫೋಟೋಗಳಿಗೆ ಸಂಬಂಧಪಟ್ಟಂತೆ ಮಹಿಳೆ ಸ್ಪಷ್ಟೀಕರಣ ನೀಡಿದ್ದಾರೆ.

ಪ್ರಕರಣ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಹೇಳಿಕೆ ನೀಡಿರುವ ಮಹಿಳೆ, ಶಾಸಕರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ನನ್ನ ವೈಯಕ್ತಿಕವಾಗಿರುವ ಫೋಟೊಗಳನ್ನು ಶಾಸಕರ ಫೋಟೋ ಜೊತೆ ಜೋಡಿಸಲಾಗಿದ್ದು, ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ನೋವಾಗಿದೆ ಎಂದು ದೂರುದಾರ ಮಹಿಳೆ ತಿಳಿಸಿದ್ದಾರೆ.

ನಾನು ಶಾಸಕರನ್ನು ಭೇಟಿ ಮಾಡುವ ಪ್ರಸಂಗ ಈ ಹಿಂದೆ ಬಂದಿರಲೇ ಇಲ್ಲ. ಹಾಗಾಗಿ ನಾನು ಪೋಟೋ ಎಡಿಟ್ ಮಾಡಿ ವೈರಲ್ ಮಾಡಿದವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ. ‌ಪುತ್ತೂರು ಶಾಸಕರ ಜೊತೆಗೆ ಇರುವುದೆನ್ನಲಾದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

- Advertisement -

Latest News

error: Content is protected !!