Monday, June 8, 2026
Homeಕರಾವಳಿಮಂಗಳೂರು:ಸಂಬಂಧಿಕರ ಮನೆಯಲ್ಲಿದ್ದ ಯುವತಿ ನಾಪತ್ತೆ

ಮಂಗಳೂರು:ಸಂಬಂಧಿಕರ ಮನೆಯಲ್ಲಿದ್ದ ಯುವತಿ ನಾಪತ್ತೆ

- Advertisement -
- Advertisement -

ಮಂಗಳೂರಿಗ ಸಂಬಂಧಿಕರ ಮನೆಯಲ್ಲಿದ್ದ ಮೂಲತಃ ದೆಹಲಿಯವಳಾದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ನಡೆದಿದೆ. ದೀಕ್ಷಿತಾ ಅಲಿಯಾಸ್‌ ರಿಯಾ (20) ನಾಪತ್ತೆಯಾದ ಯುವತಿ.

ಈಕೆ ಅಶೋಕನಗರ ಗೋಕುಲ ಕಲ್ಯಾಣ ಮಂಟಪ ಬಳಿ ತನ್ನ ಸಂಬಂಧಿಕರ ಮನೆಯಲ್ಲಿ ಕಳೆದ 5 ವರ್ಷಗಳಿಂದ ನೆಲೆಸಿದ್ದಳು. ಸದಾ ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆಯುತ್ತಿದ್ದರಿಂದ ಆಕೆಗೆ ಮನೆಯವರು ಬುದ್ಧಿಮಾತು ಹೇಳಿದ್ದರು ಎನ್ನಲಾಗಿದ್ದು. ಎಪ್ರಿಲ್ 4ರಂದು ಸಂಜೆ 5 ಗಂಟೆಗೆ ಮನೆಯಿಂದ ತೆರಳಿದವಳು ಮರಳಿ ಮನೆಗೆ ಬಂದಿಲ್ಲ.


ಚಹರೆ: ಎತ್ತರ 5.1 ಅಡಿ ಎತ್ತರ, ದುಂಡು ಮುಖ ಗೋಧಿ ಮೈಬಣ್ಣ. ಮನೆಯಿಂದ ಹೋಗುವಾಗ ಹಳದಿ ನೀಲಿ ಮಿಶ್ರಿತ ಚೂಡಿದಾರ ಧರಿಸಿದ್ದು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಯುವತಿ ಕಂಡುಬಂದಲ್ಲಿ ಉರ್ವ ಪೊಲೀಸ್‌ ಠಾಣೆ ಅಥವಾ ಕಂಟ್ರೋಲ್‌ ರೂಮ್‌ ಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!