Thursday, June 4, 2026
Homeಕರಾವಳಿವಿರಾಜಪೇಟೆಯ ಶಾಲಾ ಶಿಕ್ಷಕಿ ರಸ್ತೆ ಅಪಘಾತದಲ್ಲಿ ಸಾವು

ವಿರಾಜಪೇಟೆಯ ಶಾಲಾ ಶಿಕ್ಷಕಿ ರಸ್ತೆ ಅಪಘಾತದಲ್ಲಿ ಸಾವು

- Advertisement -
- Advertisement -

ಮಡಿಕೇರಿ: ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಶಿಕ್ಷಕಿ ಕ್ರಿಸ್ಟಲಿನ ಅವರು ಹುಣಸೂರಿನ ಬನ್ನಿಕುಪ್ಪೆ ಬಳಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಮೈಸೂರಿನ ಕಾಲೇಜಿಗೆ ಸೆ. 25ರ ಬುಧವಾರದಂದು ತಮ್ಮ ಪುತ್ರನನ್ನು ಸೇರಿಸಿ ಪತಿಯೊಂದಿಗೆ ಕಾರಿನಲ್ಲಿ ವಿರಾಜಪೇಟೆಗೆ ಮರಳುತ್ತಿದ್ದಾಗ ಬನ್ನಿಕುಪ್ಪೆ ಬಳಿ ಬೊಲೆರೋ ಡಿಕ್ಕಿಯಾಗಿ ಕ್ರಿಸ್ಟಲಿನ ಗಾಯಗೊಂಡಿದ್ದರು ಎನ್ನಲಾಗಿದೆ. ತಕ್ಷಣದಲ್ಲೇ ಅವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಿಸದೆ ಸೆ.26ರ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಕ್ರಿಸ್ಟಲಿನ ವಿರಾಜಪೇಟೆ ಬೇಟೋಳಿ ನಿವಾಸಿ ಸಬಾಸ್ಟಿನ್ ಅವರ ಪತ್ನಿ. ಮೃತರ ಅಂತ್ಯಕ್ರಿಯೆ ಸೆ.27ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಮೃತರು ಪತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!