Thursday, June 4, 2026
Homeಚಿಕ್ಕಮಗಳೂರುಶಾಸಕರೇ ಉದ್ಘಾಟನೆಗೆ ಬರಬೇಕೆಂದು ರಸ್ತೆಗೆ ಬೀಗ!

ಶಾಸಕರೇ ಉದ್ಘಾಟನೆಗೆ ಬರಬೇಕೆಂದು ರಸ್ತೆಗೆ ಬೀಗ!

- Advertisement -
- Advertisement -

ಚಿಕ್ಕಮಗಳೂರು: ಶಾಸಕರೇ ರಸ್ತೆ ಉದ್ಘಾಟನೆ ಮಾಡಬೇಕೆಂದು ರಸ್ತೆಗೆ ಬೀಗ ಜಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಕಳಸ ತಾಲೂಕಿನ ಮಾವಿನ ಹೊಲ-ಮಣ್ಣಿನಪಾಲ್ ಗ್ರಾಮದ ರಸ್ತೆಗೆ ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿಸಿದ ಬಿಜೆಪಿ ಸದಸ್ಯರು ಬೀಗ ಹಾಕಿದ್ದಾರೆ.

ರಸ್ತೆ ಉದ್ಘಾಟನೆಗೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರೇ ಬರಬೇಕೆಂದು ರಸ್ತೆಗೆ ಪೊಲೀಸ್ ಇಲಾಖೆಯ ಬ್ಯಾರಿಕೇಡ್ ಜೋಡಿಸಿ ಬೀಗ ಹಾಕಲಾಗಿದೆ.

ಅಲ್ಲದೇ ಜೆಸಿಬಿ ತರಿಸಿ ರಸ್ತೆಯ ಮೇಲೆ ಬೃಹತ್ ಕಲ್ಲು ಇರಿಸಲಾಗಿದೆ.

3.20 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಮುಗಿದು ಒಂದು ತಿಂಗಳು ಕಳೆದಿದ್ದು ರಸ್ತೆಗೆ ಬೀಗ ಹಾಕಿದ್ದರಿಂದ ಓಡಾಡಲು ಜನಸಾಮಾನ್ಯರು ಪರದಾಡುವಂತಾಗಿದೆ.

ಮಾವಿನಹೊಲ-ಮಣ್ಣಿನಪಾಲ್ ಗ್ರಾಮ ನಕ್ಸಲ್ ಪೀಡಿತ ಪ್ರದೇಶವಾಗಿದೆ.

- Advertisement -

Latest News

error: Content is protected !!