Wednesday, May 15, 2024
Homeತಾಜಾ ಸುದ್ದಿಬ್ಯಾರಲಗದ್ದೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

ಬ್ಯಾರಲಗದ್ದೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

spot_img
- Advertisement -
- Advertisement -

ಕೊಟ್ಟಿಗೆಹಾರ: ರಸ್ತೆ ಅವ್ಯವಸ್ಥೆ ಮತ್ತು ಸೇತುವೆ ನಿರ್ಮಾಣವಾಗದಿರುವುದನ್ನು ಖಂಡಿಸಿ ಸುಂಕಸಾಲೆ ಗ್ರಾ.ಪಂ ವ್ಯಾಪ್ತಿಯ ಬ್ಯಾರಲಗದ್ದೆ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಸುಂಕಸಾಲೆ ಗ್ರಾ.ಪಂ ವ್ಯಾಪ್ತಿಯ ಅರಮನೆ ತಲಗೂರು ಗ್ರಾಮದ ಬಿಳಗಲಿಯಿಂದ ಬ್ಯಾರಲಗದ್ದೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಮಾರ್ಗದಲ್ಲಿ ಸೇತುವೆ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಕೂಡ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಬ್ಯಾರಲಗದ್ದೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಹಾಕಲಾಗಿದ್ದು ಬ್ಯಾನರ್‍ನಲ್ಲಿ ಮೂಡಿಗೆರೆ ತಾಲ್ಲೂಕು ಸುಂಕಸಾಲೆ ಗ್ರ.ಪಂ ವ್ಯಾಪ್ತಿಯ ಅರಮನೆ ತಲಗೂರು ಗ್ರಾಮದ ಬಿಳಗಲಿಯಿಂದ ಬ್ಯಾರಲಗದ್ದೆಗೆ ಹೋಗುವ ರಸ್ತೆ  ಮತ್ತು ಸೇತುವೆ ನಿರ್ಮಾಣಕ್ಕಾಗಿ ಹಲವಾರು ಬಾರಿ ಮನವಿ ಮಾಡಿ ಪ್ರಯೋಜನವಾಗದೇ ಇರುವ ಹಿನ್ನಲೆಯಲ್ಲಿ ಬ್ಯಾರಲಗದ್ದೆ ಗ್ರಾಮಸ್ಥರು ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಬರೆಯಲಾಗಿದೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗಂಗಮ್ಮ, ಸದಾಶಿವ, ಸುನಂದ, ಹರೀಶ್, ಸಂತೋಷ್, ಶಿವಕುಮಾರ್, ಸುರೇಶ್, ನಿತೀನ್, ಗಣೇಶ್, ರಾಜೇಶ್ ಮುಂತಾದವರು ಇದ್ದರು.

- Advertisement -
spot_img

Latest News

error: Content is protected !!