Friday, June 5, 2026
Homeತಾಜಾ ಸುದ್ದಿಕರ್ತವ್ಯವೇಳೆ ಕಂಠಪೂರ್ತಿ ಕುಡಿದ ಗ್ರಾಮಲೆಕ್ಕಾಧಿಕಾರಿ: ತಹಶೀಲ್ದಾರ್ ಕಚೇರಿಯ ಮುಂದೆಯೇ ಗಡದ್ ನಿದ್ದೆ

ಕರ್ತವ್ಯವೇಳೆ ಕಂಠಪೂರ್ತಿ ಕುಡಿದ ಗ್ರಾಮಲೆಕ್ಕಾಧಿಕಾರಿ: ತಹಶೀಲ್ದಾರ್ ಕಚೇರಿಯ ಮುಂದೆಯೇ ಗಡದ್ ನಿದ್ದೆ

- Advertisement -
- Advertisement -

ಬೆಳಗಾವಿ: ಕರ್ತವ್ಯವೇಳೆ ಕಂಠಪೂರ್ತಿ ಕುಡಿದು ತಾಲೂಕು ತಹಶೀಲ್ದಾರ ಕಚೇರಿಯ ಮುಂದೆ ಗ್ರಾಮಲೆಕ್ಕಾಧಿಕಾರಿ ಅಡ್ಡಲಾಗಿ ಮಲಗಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಹಶೀಲ್ದಾರ್ ಕಚೇರಿ ಎದುರು ನಡೆದಿದೆ.

ತಹಶೀಲ್ದಾರ್ ಕಚೇರಿ ಎದುರು ಕಂಠಪೂರ್ತಿ ಕುಡಿದು ಮಲಗಿದ ವಿಡಿಯೋ ವೈರಲ್ ಆಗಿದೆ. ಸಂಜು ಬೆಣ್ಣಿ ಕಂಠಪೂರ್ತಿ ಕುಡಿದು ಮಲಗಿರುವ ಗ್ರಾಮಲೆಕ್ಕಾಧಿಕಾರಿ. ಮೊದಲು ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಆಗಿದ್ದ ಸಂಜು ಬೆಣ್ಣಿ ಅವರು ಅಲ್ಲಿಯೂ ಕರ್ತವ್ಯ ವೇಳೆ ಕಂಠಪೂರ್ತಿ ಕುಡಿಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸವದತ್ತಿ ತಹಶೀಲ್ದಾರ್ ಕಚೇರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೂ ತಹಶೀಲ್ದಾರ್ ಕಚೇರಿಯಲ್ಲಿಯೂ ತನ್ನ ಚಾಳಿ ಮುಂದುವರೆಸಿದ್ದಾರೆ.

ಇಷ್ಟಾದರೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

- Advertisement -

Latest News

error: Content is protected !!