Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಮಾರಗುತ್ತು ಯಂ.ವಿಜಯರಾಜ ಅಧಿಕಾರಿ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಮಾರಗುತ್ತು ಯಂ.ವಿಜಯರಾಜ ಅಧಿಕಾರಿ ಹೃದಯಾಘಾತದಿಂದ ನಿಧನ

- Advertisement -
- Advertisement -

ಬೆಳ್ತಂಗಡಿ : ಮಾರಗುತ್ತು ಯಂ. ವಿಜಯರಾಜ ಅಧಿಕಾರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ವೇಣೂರು ಗ್ರಾಮದ ಮಾರಗುತ್ತು ಮನೆ ನಿವಾಸಿಯಾಗಿರುವ ಅವರು, ವೇಣೂರು ಶ್ರೀ ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿ ಮಾಜಿ ಕಾರ್ಯದರ್ಶಿಗಳಾಗಿದ್ದರು. ಅಲ್ಲದೇ, ದೈವದ ಗಡಿ ಪ್ರಧಾನರಾಗಿದ್ದರು.


ಉಪನ್ಯಾಸಕರಾಗಿದ್ದ ಇವರು ಪ್ರಗತಿಪರ ಕೃಷಿಕ ಮಾತ್ರವಲ್ಲದೇ  ಧಾರ್ಮಿಕ, ಸಮಾಜ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಹವೇಣೂರು, ಬಜಿರೆ, ಗುಂಡೂರಿ ಗ್ರಾಮಗಳ ಗಡಿ ಪ್ರಧಾನರಾಗಿ ಗ್ರಾಮದ ಜನರಿಗೆ ಮಾರ್ಗದರ್ಶಕರಾಗಿದ್ದರು.

ಇವರ ನಿಧನಕ್ಕೆ  ಜನ ಕಂಬನಿ ಮಿಡಿದಿದ್ದಾರೆ. ಮುದ್ದಾಡಿ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿದ್ದುಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದರು. ಇವರು ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!