Saturday, June 13, 2026
Homeತಾಜಾ ಸುದ್ದಿಮಧ್ಯದ ದೊರೆ ವಿಜಯ್ ಮಲ್ಯರನ್ನು ದಿವಾಳಿ ಎಂದು ಘೋಷಿಸಿದ ಯುಕೆ ನ್ಯಾಯಾಲಯ!!

ಮಧ್ಯದ ದೊರೆ ವಿಜಯ್ ಮಲ್ಯರನ್ನು ದಿವಾಳಿ ಎಂದು ಘೋಷಿಸಿದ ಯುಕೆ ನ್ಯಾಯಾಲಯ!!

- Advertisement -
- Advertisement -

ಲಂಡನ್: ಬ್ಯಾಂಕ್​ ಸಾಲ ತೀರಿಸದೆ ಭಾರತದಿಂದ ಕಾಲ್ಕಿತ್ತಿದ್ದ ಉದ್ಯಮಿ ವಿಜಯ್​ ಮಲ್ಯರನ್ನ ಬ್ರಿಟನ್​ ಹೈಕೋರ್ಟ್ ದಿವಾಳಿ ಎಂದು ಘೋಷಿಸಿದ್ದು, ಈ ಮೂಲಕ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕ್​ ಒಕ್ಕೂಟವು ಸಾಲ ಮರುಪಾವತಿ ಮಾಡಿಕೊಳ್ಳಲು ವಿಶ್ವದಾದ್ಯಂತ ಇರುವ ವಿಜಯ್​ ಮಲ್ಯರ ಆಸ್ತಿಯನ್ನ ಮುಟ್ಟುಗೋಲು ಹಾಕಲು ಮುಂದಡಿ ಇರಿಸಲು ನೆರವಾಗಲಿದೆ.

ಯುಕೆ ಕಾಲಮಾನ 3 ಗಂಟೆ 45 ನಿಮಿಷದ ವೇಳೆಯಲ್ಲಿ ತೀರ್ಪು ನೀಡಿದ ಯುಕೆ ನ್ಯಾಯಮೂರ್ತಿ ಮೈಕಲ್​​ ಬ್ರಿಗ್ಸ್​​ ವಿಜಯ್​ ಮಲ್ಯ ದಿವಾಳಿಯಾಗಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ‘ಮಲ್ಯ ಅವರು ಸಾಲವನ್ನು ಅರ್ಜಿದಾರರಿಗೆ (ಬ್ಯಾಂಕ್‌ಗಳ ಒಕ್ಕೂಟ) ಪೂರ್ತಿಯಾಗಿ, ನಿಗದಿತ ಅವಧಿಯೊಳಗೆ ಹಿಂದಿರುಗಿಸುತ್ತಾರೆ ಎಂದು ಹೇಳಲು ಸಾಕಷ್ಟು ಆಧಾರಗಳಿಲ್ಲ’ ಎಂದು ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.

‘ದಿವಾಳಿ’ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಲು ಅವಕಾಶ ಕೊಡಬೇಕು ಎಂಬ ಅರ್ಜಿಯನ್ನು ಮಲ್ಯ ಅವರು ಸಲ್ಲಿಸಿದ್ದು,ಮೇಲ್ಮನವಿಯಲ್ಲೂ ಯಶಸ್ಸು ಕಾಣುವ ಸಾಧ್ಯತೆ ಇಲ್ಲ ಎಂದು ನ್ಯಾಯಾಧೀಶರು ಈ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

- Advertisement -

Latest News

error: Content is protected !!