Sunday, April 28, 2024
Homeಕರಾವಳಿಭಯೋತ್ಪಾದಕ ನಿಗ್ರಹದಳ ಮತ್ತು NIA ಕಚೇರಿ ಮಂಗಳೂರಿನಲ್ಲಿ ಸ್ಥಾಪಿಸಲು ಇದು ಸೂಕ್ತ ಸಂಧರ್ಭ - ವಿಶ್ವ...

ಭಯೋತ್ಪಾದಕ ನಿಗ್ರಹದಳ ಮತ್ತು NIA ಕಚೇರಿ ಮಂಗಳೂರಿನಲ್ಲಿ ಸ್ಥಾಪಿಸಲು ಇದು ಸೂಕ್ತ ಸಂಧರ್ಭ – ವಿಶ್ವ ಹಿಂದೂ ಪರಿಷತ್

spot_img
- Advertisement -
- Advertisement -

ಮಂಗಳೂರು: ದೇಶದ ಯಾವುದೇ ಮೂಲೆಯಲ್ಲಿ ಭಯೋತ್ಪಾದಕ ಕೃತ್ಯ ನಡೆದರೆ ಅದಕ್ಕೆ ಕರಾವಳಿಯ ಸಂಪರ್ಕವಿರುವುದು ಕರಾವಳಿ ಭದ್ರತೆಗೆ ಅಪಾಯವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶಾಶ್ವತವಾಗಿ NIA ಮತ್ತು ಭಯೋತ್ಪಾದಕ ನಿಗ್ರಹದಳದ ಕಚೇರಿ ಸ್ಥಾಪಿಸಲು ಸೂಕ್ತ ಸಂಧರ್ಭವಾಗಿದ್ದು, ತಕ್ಷಣ ಕೇಂದ್ರ ಮತ್ತು ರಾಜ್ಯಸರಕಾರ, ಕರಾವಳಿಯ ಜನ ಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪವೆಲ್ ಆಗ್ರಹಿಸಿದ್ದಾರೆ.

ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ (ಐಸಿಸ್) ನ ಚಟುವಟಿಕೆಗಳನ್ನು ವಿಸ್ತರಿಸಲು ಸಂಚು ರೂಪಿಸುತ್ತಿರುವುದು ಮಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನದಿಂದ ಸಾಬೀತಾಗಿದೆ. ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯ ಸಂಪರ್ಕದ ಹಿನ್ನೆಲೆಯಲ್ಲಿ ಉಳ್ಳಾಲದ PA ಕಾಲೇಜಿನ ವಿದ್ಯಾರ್ಥಿ ಉಡುಪಿ ಜಿಲ್ಲೆಯ ನಿವಾಸಿ ರಿಶಾನ್ ತಾಜುದ್ದೀನ್ ಶೇಖ್, ಮತ್ತು ನಿನ್ನೆ ತೊಕ್ಕೊಟ್ಟು ಬಬ್ಬುಕಟ್ಟೆ ನಿವಾಸಿ ಮಾಝಿನ್ ಅಬ್ದುಲ್ ರೆಹಮಾನ್ NIA ಬಂಧಿಸಿರುವುದು ಕರಾವಳಿ ಜನರಲ್ಲಿ ಆತಂಕ ಮೂಡಿಸಿದೆ.

ಭಯೋತ್ಪಾದ ನೆ ಮತ್ತು ಮತಾಂಧತೆಯ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ. ಭಯೋತ್ಪಾದಕರ ಚಟುವಟಿಕೆಗಳು ಕರಾವಳಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಕರಾವಳಿಯಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ನೆಲೆಯೂರಲು ಪ್ರಯತ್ನಿಸುತ್ತಿದ್ದಾರೆ.

ದೇಶವಿರೋಧಿ ಗೋಡೆಬರಹಗಳು, ಕಾಲೇಜು ವಿದ್ಯಾರ್ಥಿಗಳನ್ನು ವಿಧ್ವಂಸಕ ಕೃತ್ಯಗಳಿಗೆ ಜೋಡಿಸುತ್ತಿರುವುದು, ಪ್ರೀತಿ ಪ್ರೇಮದ ಹೆಸರಿನಲ್ಲಿ ಯುವತಿಯರನ್ನು ಮತಾಂತರಗೊಳಿಸಿ, ಲವ್ ಜಿಹಾದ್ ಮೂಲಕ ಅವರನ್ನು ಭಯೋತ್ಪಾದಕತೆಗೆ ಉಪಯೋಗಿಸುತ್ತಿರುವುದು, ಬಾಂಬ್ ಸ್ಫೋಟ ತರಬೇತಿಗೆ ಸಂಚು ರೂಪಿಸುವುದು, ಹಿಂದೂಗಳನ್ನೂ ಅಮಾನುಷವಾಗಿ ಹತ್ಯೆ ಮಾಡಿಸುವುದು, ಕುಕ್ಕರ್ ಬಾಂಬ್ ಸ್ಪೋಟಿಸಿ ಜನರಲ್ಲಿ ಭಯವನ್ನು ಹುಟ್ಟಿಸುವುದು ಇದನೆಲ್ಲ ಕಂಡಾಗ ಜಿಲ್ಲೆಯಲ್ಲಿ ಇಸ್ಲಾಮಿಕ್ ಐಸಿಸ್ ಮೂಲಭೂತವಾದಿಗಳು ಕರಾವಳಿಯನ್ನು ಗುರಿಯಾಸಿರುವುದು ಸ್ಪಷ್ಟವಾಗಿದ್ದು ಇದು ಬಹಳ ಆತಂಕಕಾರಿ ವಿಚಾರವಾಗಿದೆ. ಈ ಬಗ್ಗೆ ಕರಾವಳಿಯ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ, ಕರಾವಳಿಯಲ್ಲಿ ಭಯೋದ್ಪಾದಕ ಚಟುವಟಿಕೆಯನ್ನು ಕಿತ್ತೊಗೆಯಲು ಕೈಜೋಡಿಸಬೇಕಾಗಿದೆ ಎಂದು ಶರಣ್ ಪಂಪವೆಲ್ ಆಗ್ರಹಿಸಿದ್ದಾರೆ.

ರಾಜೇಶ್ ಸುವರ್ಣ ಸಜೀಪ ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ಆಗ್ರಹ

ಕಲ್ಲಡ್ಕ ಪ್ರಖಂಡ ಗೋರಕ್ಷ ಪ್ರಮುಖ್ ರಾಜೇಶ್ ಸುವರ್ಣ ಸಜೀಪ ಇವರು ಕಳೆದ ರಾತ್ರಿ ಪಾಣೆಮಂಗಳೂರು ಸೇತುವೆಯ ಬಳಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಶರಣ್ ಪಂಪವೆಲ್ ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!