Thursday, June 25, 2026
Homeತಾಜಾ ಸುದ್ದಿಜಾತ್ರೆಗೆ ಶುಭ ಕೋರಲು ಸನ್ನಿ ಲಿಯೋನ್ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು      

ಜಾತ್ರೆಗೆ ಶುಭ ಕೋರಲು ಸನ್ನಿ ಲಿಯೋನ್ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು      

- Advertisement -
- Advertisement -

ರಾಣೇಬೆನ್ನೂರು : ಜಾತ್ರೆಗೆ ಶುಭ ಕೋರಲು  ಅಭಿಮಾನಿಗಳು ಸನ್ನಿ ಲಿಯೋನ್ ಫ್ಲೆಕ್ಸ್ ಅಳವಡಿಸಿದ ಘಟನೆ ರಾಣೇಬೆನ್ನೂರಿನಲ್ಲಿ ನಡೆದಿದೆ. ಚೌಡೇಶ್ವರಿ ಜಾತ್ರೆಗೆ ಶುಭ ಕೋರಲು ಸನ್ನಿ ಲಿಯೋನ್ ಫ್ಲೆಕ್ಸ್ ಅಳವಡಿಸಲಾಗಿದೆ.

ರಾಣೇಬೆನ್ನೂರ ನಗರದಲ್ಲಿ ನಡೆಯುತ್ತಿರುವ ಗಂಗಾಜಲ ಚೌಡೇಶ್ವರಿ ಜಾತ್ರೆಯಲ್ಲಿ ಪಡ್ಡೆ ಹೈಕಳು ಮಾದಕ ನಟಿ ಸನ್ನಿ ಲಿಯೋನ್ ಬ್ಯಾನರ್ ಹಾಕಿ ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ.

ಸೀರೆ ಉಟ್ಟ ಸನ್ನಿ ಲಿಯೋನ್ ಬ್ಯಾನರ್ ಹಾಕಿ ಅದರಲ್ಲಿ ತಮ್ಮ ಫೋಟೋ ಹಾಕಿಕೊಂಡ ಪಡ್ಡೆ ಹೈಕಳು ಅಭಿಮಾನ ಮೆರೆದಿದ್ದಾರೆ. ಬ್ಯಾನರ್ ನಲ್ಲಿ ಬಡ ಮಕ್ಕಳ ಆಶಾ ಕಿರಣ ಸನ್ನಿ ಲಿಯೋನ್ ಅಭಿಮಾನಿಗಳ ಸಂಘ ಎಂದು ಬರೆದುಕೊಂಡಿದ್ದಾರೆ. ಸನ್ನಿಯ ಈ ಬ್ಯಾನರ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸನ್ನಿ ಲಿಯೋನ್ ಬ್ಯಾನರ್ ಜಾತ್ರೆಗೆ ಬರುವ ಮಂದಿಯ ಕಣ್ಣು ಕುಕ್ಕುತ್ತಿದ್ದು, ಹಲವು ರೀತಿಯಲ್ಲಿ ಕಮೆಂಟ್, ಅಭಿಪ್ರಾಯಗಳು ಕೇಳಿಬರುತ್ತಿದೆ.

- Advertisement -

Latest News

error: Content is protected !!