Saturday, May 4, 2024
Homeಕರಾವಳಿಕಾಸರಗೋಡುಮಲಯಾಳಂ ಚಿತ್ರರಂಗದ ಹಿರಿಯ ನಟ ಅನಾರೋಗ್ಯದಿಂದ ನಿಧನ

ಮಲಯಾಳಂ ಚಿತ್ರರಂಗದ ಹಿರಿಯ ನಟ ಅನಾರೋಗ್ಯದಿಂದ ನಿಧನ

spot_img
- Advertisement -
- Advertisement -

ಕೊಚ್ಚಿ: 90ರ ದಶಕ ಮತ್ತು ನಂತರದ ವರ್ಷಗಳಲ್ಲಿ ತಮ್ಮ ಹಾಸ್ಯ ನಟನೆಯ ಮೂಲಕ ಮಲೆಯಾಳಂ ಚಿತ್ರರಂಗದಲ್ಲಿ ಭಾರಿ ಜನಪ್ರೀಯತೆ ಪಡೆದಿದ್ದ ನಟ ಕೆಟಿಎಸ್ ಪಡನ್ನಯಿಲ್(88) ಅವರು ವಯೋಸಹಜ ಕಾಯಿಲೆಯಿಂದಾಗಿ ಕೊಚ್ಚಿಯ ಇಂದಿರಾ ಗಾಂಧಿ ಸಹಕಾರಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾದರು ಎಂದು ಮೂಲಗಳು ತಿಳಿಸಿವೆ.

ರಂಗಭೂಮಿ ಮೂಲಕ ಪಡನ್ನಯಿಲ್ ಅವರು ಅಭಿನಯ ವೃತ್ತಿಯನ್ನು ಆರಂಭಿಸಿದರು. ರಾಜಸೇನನ್ ನಿರ್ದೇಶನದ ‘ಅನಿಯನ್ ಬಾವಾ ಚೆಟ್ಟನ್ ಬಾವಾ’ ಚಿತ್ರವು ಅವರ ಚೊಚ್ಚಲ ಚಿತ್ರವಾಗಿದ್ದು 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರು ತಮ್ಮ ಹಾಸ್ಯ ನಟನೆಗೆ ‍ಜನಪ್ರಿಯತೆ ಪಡೆದಿದ್ದರು. ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದರು.

- Advertisement -
spot_img

Latest News

error: Content is protected !!