Thursday, June 4, 2026
Homeತಾಜಾ ಸುದ್ದಿಮಂಗಳೂರು ಮೂಲದ ಹಿರಿಯ ಆರ್ ಎಸ್ ಎಸ್ ಪ್ರಚಾರಕ ಚಂದ್ರಶೇಖರ ಭಂಡಾರಿ ನಿಧನ

ಮಂಗಳೂರು ಮೂಲದ ಹಿರಿಯ ಆರ್ ಎಸ್ ಎಸ್ ಪ್ರಚಾರಕ ಚಂದ್ರಶೇಖರ ಭಂಡಾರಿ ನಿಧನ

- Advertisement -
- Advertisement -

ಬೆಂಗಳೂರು: ಹಿರಿಯ ಆರ್ ಎಸ್ ಎಸ್ ಪ್ರಚಾರಕ ಚಂದ್ರಶೇಖರ ಭಂಡಾರಿ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಚಂದ್ರಶೇಖರ ಭಂಡಾರಿ ಅವರಿಗೆ 87 ವರ್ಷ ವಯಸ್ಸಾಗಿತ್ತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಭಂಡಾರಿ, ಮಾಜಿ ಪ್ರಾಂತ ಪ್ರಚಾರ ಪ್ರಮುಖ್ ಆಗಿ ಸೇವೆ ಸಲ್ಲಿಸಿದ್ದರು.

ಅಲ್ಲದೇ ಎಬಿಬಿಪಿಯ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ವಿಶ್ವ ಸಂವಾದ ಕೇಂದ್ರದ ಸ್ಥಾಪಕ ಟ್ರಸ್ಟಿಯಾಗಿ, ಲೇಖಕ ಮತ್ತು ಕವಿಯಾಗಿಯೂ ಚಂದ್ರಶೇಖರ ಭಂಡಾರಿ ಕೆಲಸ ಮಾಡಿದ್ದರು. ಮೂಲತಃ ಮಂಗಳೂರಿನವರಾದ ಚಂದ್ರಶೇಖರ ಭಂಡಾರಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದರು.

- Advertisement -

Latest News

error: Content is protected !!