ಶ್ರೀನಗರ: ಜಮ್ಮು-ಕಾಶ್ಮೀರದ ದೋಡಾದಲ್ಲಿ ಸೇನಾ ಯೋಧರನ್ನು ಹೊತ್ತೊಯ್ಯುತ್ತಿದ್ದ ವಾಹನ ಮಗುಚಿ ಕಂದಕಕ್ಕೆ ಬಿದ್ದಿದ್ದು, ಘಟನೆಯಲ್ಲಿ ಹತ್ತು ಮಂದಿ ಯೋಧರು ಕೊನೆಯುಸಿರೆಳೆದಿದ್ದು, ಹಲ್ಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಸೇನಾ ವಾಹನ ಒಟ್ಟು 17 ಯೋಧರನ್ನು ಕರೆದೊಯ್ಯುತ್ತಿದ್ದು, ಈ ವಾಹನ ಅತೀ ಎತ್ತರದ ಸೇನಾ ಶಿಬಿರಕ್ಕೆ ತೆರಳಬೇಕಾಗಿತ್ತು. ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಗುಂಡು ನಿರೋಧಕ ಸೇನಾ ವಾಹನವು ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಪರಿಣಾಮವಾಗಿ ವಾಹನವು ಸುಮಾರು 200 ಅಡಿ ಆಳದ ಪ್ರಪಾತಕ್ಕೆ ಬಿದ್ದು ಈ ದುರ್ಘಟನೆ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ನ ಈ ಬಗ್ಗೆ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ದೋಡಾದಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ, ಹತ್ತು ಮಂದಿ ನಮ್ಮ ಧೀರ ಯೋಧರು ಇಹಲೋಕ ತ್ಯಜಿಸ್ತಿರುವುದು ದುರದೃಷ್ಟಕರ ಘಟನೆಯಾಗಿದೆ.
ಯೋಧರ ಕುಟುಂಬಗಳಿಗೆ ನನ್ನ ಸಂತಾಪ ತಿಳಿಸುವುದಾಗಿ ಉಲ್ಲೇಖಿಸಿದ್ದಾರೆ.ಈಗಾಗಲೇ ರಕ್ಷಣಾ ಕಾರ್ಯಚರಣೆ ಮುಂದುವರದಿದ್ದು, ಘಟನೆಯಲ್ಲಿನ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.


