Saturday, June 6, 2026
Homeತಾಜಾ ಸುದ್ದಿವೀರಪ್ಪನ್ ಸಹೋದರ ಮಥೈಯನ್ ಹೃದಯಾಘಾತದಿಂದ ನಿಧನ

ವೀರಪ್ಪನ್ ಸಹೋದರ ಮಥೈಯನ್ ಹೃದಯಾಘಾತದಿಂದ ನಿಧನ

- Advertisement -
- Advertisement -

ಚೆನ್ನೈ: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಡುಗಳ್ಳ ವೀರಪ್ಪನ್ ಸಹೋದರ ಮಥೈಯನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಮಿಳುನಾಡಿನ ಸೇಲಂ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ವೀರಪ್ಪನ್ ಹಿರಿಯ ಸಹೋದರ ಮಥೈಯನ್‌ ರನ್ನು ಕೆಲವು ವಾರದ ಹಿಂದೆ ಉಸಿರಾಟದ ಸಮಸ್ಯೆಯಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

25 ವರ್ಷಗಳ ಹಿಂದೆ ಸತ್ಯಮಂಗಲದಲ್ಲಿ ಅರಣ್ಯ ಅಧಿಕಾರಿ ಹತ್ಯೆಗೆ ಸಂಬಂಧಿಸಿದಂತೆ 1997 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಕಾಡುಗಳ್ಳ ವೀರಪ್ಪನ್ ನನ್ನು 2004 ರಲ್ಲಿ ಎಸ್ ಟಿಎಫ್ ಗುಂಡಿಕ್ಕಿ ಹತ್ಯೆ ಮಾಡಿತ್ತು.

- Advertisement -

Latest News

error: Content is protected !!